ಬಹರೈನ್ ; ದ್ವೀಪದ 32 ಬಲಿಷ್ಠ ಕ್ರಿಕೆಟ್ ತಂಡಗಳು , 64 ರೋಮಾಂಚಕ ಪಂದ್ಯಾಟಗಳ 15 ದಿನಗಳ ಕಾಲ ದ್ವೀಪದ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ” ಕನ್ನಡ ಸಂಘ ಬಹರೈನ್ ಸಿಕ್ಸರ್ಸ್ ” ಹೊನಲು ಬೆಳಕು ಪಂದ್ಯಾಟ ಇಲ್ಲಿನ ಗಲ್ಫ್ ಏರ್ ಕ್ಲಬ್ಬಿನ ಕ್ರೀಡಾಂಗಣದಲ್ಲಿ ಸಾವಿರಾರು ಕ್ರಿಕೆಟ್ ಪ್ರೇಮಿಗಳು ಹಾಗು ಗಣ್ಯರುಗಳ ಸಮ್ಮುಖದಲ್ಲಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು .
ಸೆಮಿಫೈನಲ್ ನಲ್ಲಿ ರೈಸಿಂಗ್ ಸ್ಟಾರ್ ತಂಡವನ್ನು ಸೋಲಿಸಿ ಬರ್ಜರ್ ಬ್ಲೂ ತಂಡ ಅಂತಿಮ ಹಂತಕ್ಕೆರಿದರೆ , ಟಾರ್ಗೆಟ್ ಸಿ ಸಿ ತಂಡವು ಬೆಹಬಾನಿ ಬ್ರದರ್ಸ್ ತಂಡವನ್ನು ಮಣಿಸಿ ಅಂತಿಮ ಹಂತಕ್ಕೆರಿತು . ಅಂತಿಮ ಪಂದ್ಯಾಟದಲ್ಲಿ ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊಂಡ ಟಾರ್ಗೆಟ್ ಸಿ ಸಿ ತಂಡವು ಬ್ಯಾಟಿಂಗನ್ನು ಆಯ್ಕೆಮಾಡಿಕೊಂಡು ಬರ್ಜರ್ ಬ್ಲೂ ತಂಡದ ಕರಾರುವಕ್ಕಾದ ಎಸೆತಗಳಿಗೆ ತತ್ತರಿಸಿ ಕೇವಲ 5.3 ಓವರುಗಳಲ್ಲಿ ತನ್ನೆಲ್ಲಾ ಉದ್ದರಿಗಳನ್ನು ಕಳೆದುಕೊಂಡು ಕೇವಲ 31 ರನ್ನುಗಳನ್ನು ಮಾತ್ರ ಪೇರಿಸಲು ಶಕ್ತವಾಯಿತು ಇದಕ್ಕುತ್ತರವಾಗಿ ಅತ್ಯುತ್ತಮ ಬ್ಯಾಟಿಂಗ ಪ್ರದರ್ಶನ ನೀಡಿದ ಬರ್ಜರ್ ಬ್ಲೂ ತಂಡ ಕೇವಲ 3.2 ಓವರುಗಳಲ್ಲಿ ಒಂದು ಉದ್ದರಿಯನ್ನು ಕಳೆದುಕೊಂಡು ಜಯ ದಾಖಲಿಸಿ ಪ್ರತಿಷ್ಟಿತ ಕನ್ನಡ ಸಂಘ ಬಹರೈನ್ ಸಿಕ್ಸರ್ಸ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು .
ಸಮಾರೋಪ ಸಮಾರಂಭದಲ್ಲಿ ಗಲ್ಫ್ ಏರ್ ಸಂಸ್ಥೆಯ ಅದ್ನಾನ್ ಅಲ ಕಾದೆಮ್ ,ಆರ್ಟಿಸ್ಟಿಕ್ ಜಿಮ್ನ್ಯಾಸ್ಟಿಕ್ ನ ಅಧ್ಯಕ್ಷರಾದ ಒಮ್ರಾನ್ ಅಲ್ ನಜ್ದ ,ಸ್ಥಳೀಯ ಗಲ್ಫ್ ಡೈಲಿ ನ್ಯೂಸ್ ದಿನ ಪತ್ರಿಕೆಯ ಕ್ರೀಡಾ ಸಂಪಾದಕರಾದ ವಿಜಯ್ ಮ್ರತ್ಯುಂಜಯ ಮುಂತಾದವರು ಉಪಸ್ಥಿತರಿದ್ದರು .
ಕ್ರೀಡಾ ಕಾರ್ಯದರ್ಶಿ ಶ್ರೀ ಜಯರಾಜ್ ಭಂಡಾರಿಯವರ ಕನಸಿನ ಕೂಸು ಈ ಪಂದ್ಯಾಟವಾಗಿದ್ದು ,ಶ್ರೀಯುತರಾದ ಅಮರನಾಥ್ ರೈ ,ರಮೇಶ್ ಮಂಜೆಶ್ವರ್ ,ವಿಪುಲ್ ದಾವೆ ,ಡಿ ,ರಮೇಶ್ ,ಅಶ್ವಿನ್ ಪೂಜಾರಿ ,ಹೇಮಂತ್ ಸಾಲಿಯಾನ್ ,ಅಶೋಕ್ ಕಟೀಲ್,ಕೃಷ್ಣ ಶೆಟ್ಟಿ ,ವಿಜಯ್ ಕುಮಾರ್ ,ರಾಜೇಶ್ ಮಚಾದೊ,ಮಹೇಶ್ ಕುಮಾರ್,ಗುರುಪ್ರಸಾದ್ ಶೆಟ್ಟಿ,ಮೊಹಮ್ಮದ್ ಇಮ್ರಾನ್ ,ಪ್ರದೀಪ್ ಶೆಟ್ಟಿ ,ಅಬ್ದುಲ್ ರಹೀಂ ,ಜಾಹಿರ್ ಖಾನ್ ,ಆಯುಶ್ ಶೆಟ್ಟಿ ಮುಂತಾದವರು ಪಂದ್ಯಾಟದ ಯಶಸ್ಸಿಗೆ ಶ್ರಮಿಸಿದ್ದರು .
ಗೋಲ್ಡನ್ ಸಾಕರ್ ಸ್ಟಾರ್ ಅಕಾಡೆಮಿ ,ಗಲ್ಫ್ ಏರ್ ಕ್ಲಬ್ ,ವಿಯೆನ್ನಾ ವೆಂಡಿಂಗ್ ,ಗೋಕುಲ್ ರೆಸ್ಟೋರೆಂಟ್ ಹಾಗು ಮಲಬಾರ್ ಗೊಲ್ಡ್ ಈ ಪಂದ್ಯಾಟಕ್ಕೆ ಪ್ರಾಯೋಜಕರಾಗಿ ಶ್ರಮಿಸಿದ್ದರು .
ಕನ್ನಡ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಶ್ರೀ ಕಿರಣ್ ಉಪಾಧ್ಯಾಯ ಹಾಗು ಇತರ ಅತಿಥಿಗಳು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು .
ಪಂದ್ಯಾಟದ ಒಟ್ಟು ವಿಜೇತರ ವಿವರ ಈ ಕೆಳಗಿನಂತಿದೆ
ವಿಜೇತ ತಂಡ ; ಬರ್ಜರ್ ಬ್ಲೂ
ದ್ವಿತೀಯ ಸ್ಥಾನ ; ಟಾರ್ಗೆಟ್ ಸಿ.ಸಿ.
ಸರಣಿ ಶ್ರೇಷ್ಠ ; ವಕಾಸ್ ( ರೈಸಿಂಗ್ ಸ್ಟಾರ್ ತಂಡ )
ಪಂದ್ಯ ಶ್ರೇಷ್ಠ ; ಕಾರ್ತಿಕ್ ( ಬರ್ಜರ್ ಬ್ಲೂ ತಂಡ )
ಶ್ರೇಷ್ಠ ಧಾಂಡಿಗ – ಕಾರ್ತಿಕ್ ( ಬರ್ಜರ್ ಬ್ಲೂ ತಂಡ )
ಅತ್ಯುತ್ತಮ ಎಸೆತಗಾರ ( ಶೆಹಜಾದ್ ಭೆಭೆಹಾನಿ ಬ್ರದರ್ಸ್ ತಂಡ )
ಗರಿಷ್ಟ ಸಿಕ್ಸರ್ಸ್ – ಪ್ರದೀಪ್ ರೋಶನ್ (ಬರ್ಜರ್ ಬ್ಲೂ ತಂಡ )
ಅತ್ಯುತ್ತಮ ಕ್ರೀಡಾಕ್ಷಮತೆ ತೋರಿದ ತಂಡ – ಗಲ್ಫ್ ಏರ್ ತಂಡ
ಅತ್ಯುತ್ತಮ ಸಮವಸ್ತ್ರ ಧರಿಸಿದ ತಂಡ – ಶ್ರೀ ಗುಜರಾತಿ ಸಮಾಜ್ ತಂಡ
ಭರವಸೆ ಮೂಡಿಸಿರುವ ತಂಡಗಳು – ಜಿ . ಎಸ್ . ಎಸ್ ಬಹರೈನ್ ,ಟಿಸ್ಕಾ ,ವಿಶ್ವಕರ್ಮ ,ಕುಲಾಲ್ ಸಿ.ಸಿ
ವರದಿ -ಕಮಲಾಕ್ಷ ಅಮೀನ್