ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‍ನನ್ನು ಕೀಳಾಗಿ ತೋರಿಸಲಾಗಿದೆ ಎಂಬ ಕಾರಣಕ್ಕಾಗಿ `ಫ್ಯಾಂಟಮ್’ ಚಿತ್ರವನ್ನು ಈಗಾಗಲೇ ಪಾಕಿಸ್ತಾನ ಬ್ಯಾನ್ ಮಾಡಿದೆ. ಆದರೆ, ಪಾಕ್‍ನ ಈ ನಿರ್ಧಾರಕ್ಕೆ ನಟ ಸೈಫ್ ಅಲಿಖಾನ್ ತಲೆಯೇ ಕೆಡಿಸಿಕೊಂಡಿಲ್ವಂತೆ.
`ನನಗೆ ಮೊದಲೇ ಗೊತ್ತಿತ್ತು. ಕೆಲವೊಮ್ಮೆ ಹೀಗಾಗೋದು ಸಹಜ. ಅವರು ದೇಶಭಕ್ತಿಯ ಸಿನಿಮಾ ಮಾಡಿದಾಗ, ನಾವು ಅದನ್ನು ನಿಷೇಧ ಮಾಡ್ತೀವಿ. ನಾವು ಅಂಥ ಸಿನಿಮಾ ತೆಗೆದಾಗ ಪಾಕ್ನವರು ಆ ಚಿತ್ರವನ್ನು ನಿಷೇಧ ಮಾಡ್ತಾರೆ. ಎರಡೂ ದೇಶದ ರಾಜಕೀಯಗಳೂ ಇಲ್ಲಿ ಕೆಲಸ ಮಾಡುತ್ತವೆ. ಆದರೆ, ಈ ಹಿಂದೆ ರೇಸ್ನಂಥ ಸಿನಿಮಾಗಳಿಗೆ ಹೀಗೆ ಮಾಡಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ ಸೈಫ್. `ನಮ್ಮ ಸಿನಿಮಾಕ್ಕೆ ಪಾಕ್ ದೊಡ್ಡ ಮಾರ್ಕೆಟ್ ಆಗಿದ್ದರೆ ಈ ನಿಷೇಧ ನಮಗೆ ಶೇಮ್ಶೇಮ್ಆಗ್ತಿತ್ತು. ಆದರೆ, ಹಾಗಲ್ಲವಲ್ಲ.
ಹೀಗಾಗಿ, ಈ ವಿಚಾರಕ್ಕೆ ಜಾಸ್ತಿ ಆದ್ಯತೆ ಕೊಡೋದು ಬೇಡ’ ಎಂದು ಸೈಫ್ ಸಾಫ್ಟಾಗಿ ಹೇಳಿದರು. ಅಂದಹಾಗೆ, ಈ ಫ್ಯಾಂಟಮ್ನಲ್ಲಿ ಸೈಫ್ ಅಲಿಖಾನ್ ಜೊತೆಗೆ ಕತ್ರಿನಾ ಕೈಫ್ ಆ್ಯಕ್ಷನ್ ಗೆಟಪ್ನಲ್ಲಿ ನಟಿಸಿದ್ದಾರೆ. `ಏಕ್‍ಥಾ ಟೈಗರ್’ನ ಕತ್ರಿನಾಳನ್ನು ಇಲ್ಲಿ ನೋಡಬಹುದೆಂಬ ನಿರೀಕ್ಷೆ ಅಭಿಮಾನಿಗಳದ್ದು. `ಫ್ಯಾಂಟಮ್’ ಆಗಸ್ಟ್ 28ಕ್ಕೆ ತೆರೆಕಾಣಲಿದೆ. ಮುಂಬೈದಾಳಿ ಕುರಿತು ಬಂದ ಸಿನಿಮಾಗಳಿಗಿಂತ `ಫ್ಯಾಂಟಮ್’ ಅನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆಯಂತೆ.