ಮನೋರಂಜನೆ

ಪ್ರೀತಿ ಜಿಂಟಾಗೆ ಕಣ್ಣೀರು ಹಾಕಿಸಿದ್ದ ಶಾರೂಖ್!

Pinterest LinkedIn Tumblr

Preity-Zintaಪ್ರೀತಿ ಜಿಂಟಾ ಸಿನಿಮಾಕ್ಕೆ ಬಂದು 17 ವರುಷ ಆಯ್ತು ಅಂತ ಯಾರೋ ಅಭಿಮಾನಿ ಟ್ವಿಟರಿನಲ್ಲಿ ನೆನಪಿಸಿದ್ದ. ಹೀಗಾಗಿ ಪ್ರೀತಿ ಈಗ ಒಂದೊಂದೇ ಕತೆ ಹರವಿಡುತ್ತಿದ್ದಾಳೆ.

ಈಗ ಆಕೆ ಹೇಳಿದ್ದು, `ನನ್ನನ್ನು ಅನೇಕ ಸಲ ಅಳಿಸಿರುವ ನಟ ಶಾರೂಖ್ ಒಬ್ಬನೇ’ ಅನ್ನೋದು. ಶಾರೂಖ್ ಚಿವುಟಲೂ ಇಲ್ಲ, ಚುಂಬಿಸಲೂ ಇಲ್ಲ. ಹಾಗಾದರೆ ಹೇಗೆ ಅಳಿಸಿದ? ಪ್ರೀತಿ ಪಾಲಿಗೆ  ಶಾರೂಖ್ ಸಿಕ್ಕಾಪಟ್ಟೆ ಭಾವನಾತ್ಮಕವಾಗಿ ನಟಿಸುತ್ತಾನಂತೆ. ದಿಲ್ ಸೇ, ವೀರ್ ಝಾರಾ, ಕಲ್ ಹೋ ನಾ ಹೋಗಳಲ್ಲಿ ಪ್ರೀತಿ ಜಿಂಟಾ, ಶಾರೂಖ್ ಜೊತೆ ನಟಿಸಿದ್ದಾಳೆ.  ಶಾರೂಖ್ ಸಿನಿಮಾಗಳು  ನಾವೇ ಆ ಕಷ್ಟದಲ್ಲಿ ಸಿಲುಕಿದ್ದೇವೆ ಎಂಬಷ್ಟು ಫೀಲ್ ಹುಟ್ಟಿಸುತ್ತವೆ. ಈ ಭಾವನಾತ್ಮಕ ನಟನೆ ಬೇರೆಯವರಿಂದ ಆ ಪ್ರಮಾಣದಲ್ಲಿ ಬಂದಿಲ್ಲ ಅನ್ನೋದು ಪ್ರೀತಿ ಮಾತು.

The only actor who can make me cray at the drop of a hat in an emotion scene is @iamsrk omg ! I have cried in soooo many scenes with him
— Preity zinta (@realpreityzinta) August 23, 2015

Write A Comment