ಸಿನಿಮಾ ನಟ- ನಟಿಯರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಬದುಕನ್ನು ಬಹಿರಂಗಪಡಿಸದಿರುವುದೇ ಹೆಚ್ಚು. ಆದರೆ ಈ ಬಾಲಿವುಡ್ ನಟಿ ಮಾತ್ರ ಮದುವೆಯಾಗಿ ಮಕ್ಕಳಾದ ಬಳಿಕ ಈ ಹಿಂದೆ ನಿರ್ದೇಶಕರೊಬ್ಬರು ತಮ್ಮ ಪ್ರೇಮಪಾಶದಲ್ಲಿ ಬಿದ್ದ ಕುರಿತು ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ, ಖ್ಯಾತ ನಟ ಅಕ್ಷಯ್ ಕುಮಾರ್ ಜೊತೆ ವಿವಾಹವಾಗಿ ಎರಡು ಮಕ್ಕಳ ತಾಯಿಯೂ ಆಗಿದ್ದಾರೆ. ತಮ್ಮನ್ನು ನಿರ್ದೇಶಕ ಕರಣ್ ಜೋಹರ್ ಪ್ರೀತಿಸುತ್ತಿದ್ದರೆಂಬ ವಿಚಾರವನ್ನು ಟ್ವಿಂಕಲ್ ಖನ್ನಾ ಈಗ ಬಹಿರಂಗಪಡಿಸಿದ್ದಾರೆ. ಪುಣೆಯ ಬೋರ್ಡಿಂಗ್ ಸ್ಕೂಲ್ ನಲ್ಲಿ ತಾವಿಬ್ಬರು ಒಟ್ಟಿಗೆ ಕಲಿಯುತ್ತಿದ್ದ ವೇಳೆ ಕರಣ್ ತಮ್ಮ ಮನೋಭಿಲಾಷೆಯನ್ನು ವ್ಯಕ್ತಪಡಿಸಿದ್ದರೆಂದು ಟ್ವಿಂಕಲ್ ಖನ್ನಾ ಹೇಳಿಕೊಂಡಿದ್ದಾರೆ.
ಟ್ವಿಂಕಲ್ ಖನ್ನಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕರಣ್ ಜೋಹರ್, ಆ ವಯಸ್ಸಿನಲ್ಲಿ ಸಾಮಾನ್ಯವಾಗಿ ಎಲ್ಲ ಯುವಕರಂತೆ ತಾವೂ ಹುಡುಗಿಯರ ಬೆನ್ನು ಬೀಳುತ್ತಿದ್ದುದಾಗಿ ಹೇಳಿದ್ದಾರೆ. ಅಲ್ಲದೇ ಟ್ವಿಂಕಲ್ ಖನ್ನಾ ತನ್ನ ಪ್ರೇಮ ನಿರಾಕರಿಸಿದ್ದರೂ ತಮಗೆ ಬೇಸರವೆನಿಸಲಿಲ್ಲ. ಆದರೆ ತಮ್ಮ ನಿರ್ದೇಶನದ ಮೊದಲ ಚಿತ್ರ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ನಾಯಕಿಯಾಗಲು ಆಹ್ವಾನಿಸಿದಾಗ ಒಪ್ಪದಿದ್ದಕ್ಕೆ ನಿರಾಸೆಯಾಗಿತ್ತು ಎಂದಿದ್ದಾರೆ.