ರಾಷ್ಟ್ರೀಯ

ಯುವ ಜೋಡಿ ಲಾಡ್ಜ್ ನಲ್ಲಿದ್ದರೆ ಮಾಹಿತಿ ನೀಡಿ ಅಂದ್ರು ಪೊಲೀಸರು

Pinterest LinkedIn Tumblr

lodgeಅಹ್ಮದಾಬಾದ್: ಯುವ ಜೋಡಿ ಎರಡು ಗಂಟೆಗಳ ಕಾಲ ಲಾಡ್ಜ್ ಅಥವಾ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಲಾಡ್ಜ್ ಹಾಗೂ ಗೆಸ್ಟ್ ಹೌಸ್ ಮಾಲೀಕರುಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

ಅಹ್ಮದಾಬಾದ್ ಪೊಲೀಸ್ ಕಮೀಷನರ್ ಶಿವಾನಂದ್ ಜಾ ಹೊರಡಿಸಿರುವ ಈ ಆದೇಶಕ್ಕೆ ಈಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಪೊಲೀಸರು ಮಾತ್ರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಹೀಗೆ ಲಾಡ್ಜ್ ನಲ್ಲಿ ರೂಂ ಪಡೆದಿದ್ದ 19 ವರ್ಷದ ಕಾಲೇಜು ಯುವಕನೊಬ್ಬ 20 ವರ್ಷದ ತನ್ನ ಸ್ನೇಹಿತೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದ ಬಳಿಕ ಈ ಕುರಿತು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಹ್ಮದಾಬಾದ್ ನ ಎಲ್ಲ ಲಾಡ್ಜ್ ಹಾಗೂ ಗೆಸ್ಟ್ ಹೌಸ್ ಮಾಲೀಕರಿಗೆ ಈ ಸೂಚನೆ ನೀಡಿರುವ ಪೊಲೀಸರು, ರೂಂ ನೀಡುವ ಮುನ್ನ ಸಿಸಿ ಟಿವಿಯಲ್ಲಿ ಅವರುಗಳ ಚಿತ್ರ ತೆಗೆದುಕೊಳ್ಳುವಂತೆ ತಿಳಿಸಿದ್ದಾರಲ್ಲದೇ ಹೀಗೆ ಬಂದು ಒಂದೆರೆಡು ಗಂಟೆಗಳ ಕಾಲ ತಂಗುವ ಜೋಡಿಗಳ ಮೊಬೈಲ್ ನಂಬರ್ ಸೇರಿದಂತೆ ಅಧಿಕೃತ ದಾಖಲೆಗಳ ಛಾಯಾ ಪ್ರತಿಗಳನ್ನು ಪಡೆದುಕೊಳ್ಳುವಂತೆ ಹೇಳಿದ್ದಾರೆ. ಹಾಗೇ ಬಂದು ಲಾಡ್ಜ್ ನಲ್ಲಿ ತಂಗುವ ಜೋಡಿ ತೆರಳಿದ ಬಳಿಕವೂ ಅವರುಗಳ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡುವಂತೆ ಪೊಲೀಸರು ಸೂಚಿಸಿರುವುದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ.

Write A Comment