ಖ್ಯಾತ ಬಾಲಿವುಡ್ ನಟಿಯೊಬ್ಬರು ಸಲ್ಮಾನ್ ಖಾನ್ ರನ್ನು ಕಂಡರೆ ಭಯ ಪಡುತ್ತಾರಂತೆ. ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಈ ನಟಿ 5 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈಗಲೂ ಸಲ್ಮಾನ್ ಖಾನ್ ಕಂಡರೆ ತಮಗೆ ಭಯ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಈ ನಟಿ ಬೇರಾರು ಅಲ್ಲ. ಗುಳಿ ಕೆನ್ನೆ ಚೆಲುವೆ ಪ್ರೀತಿ ಝಿಂಟಾ. ಐಪಿಎಲ್ ನಲ್ಲಿ ಕಿಂಗ್ಸ್ XII ಪಂಜಾಬ್ ತಂಡದ ಸಹ ಪಾಲುದಾರರಾಗಿದ್ದ ಪ್ರೀತಿ ಝಿಂಟಾ, ತಮ್ಮ ಪಾಲುದಾರರಾಗಿದ್ದ ದೇಶದ ಖ್ಯಾತ ಉದ್ಯಮಿ ನೆಸ್ ವಾಡಿಯಾ ಜೊತೆ ಕಿತ್ತಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗೆ ನೆಸ್ ವಾಡಿಯಾ ಅಂತವರನ್ನೇ ಎದುರು ಹಾಕಿಕೊಂಡಿದ್ದ ಪ್ರೀತಿ ಝಿಂಟಾ, ಸಲ್ಮಾನ್ ಕಂಡ್ರೆ ನನಗೇನೋ ಭಯ ಎನ್ನುತ್ತಾರೆ.
ಬಾಲಿವುಡ್ ಚಿತ್ರರಂಗಕ್ಕೆ ಪ್ರೀತಿ ಝಿಂಟಾ ಕಾಲಿರಿಸಿ 17 ವರ್ಷಗಳು ಕಳೆದಿದ್ದು, ಸಲ್ಮಾನ್ ಖಾನ್ ಜೊತೆಯಲ್ಲಿ 5 ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಸಲ್ಮಾನ್ ಜೊತೆಗಿನ ‘ಚೋರಿ ಚೋರಿ ಚುಪ್ಕೇ ಚುಪ್ಕೇ’ ಚಿತ್ರ ಈ ಜೋಡಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತ್ತು. ಸಲ್ಮಾನ್ ಕಂಡರೆ ಭಯ ಎನ್ನುವ ಪ್ರೀತಿ ಅದಕ್ಕೆ ಕಾರಣ ನನಗೂ ಗೊತ್ತಿಲ್ಲ ಅಂತಾರೆ. ಸದ್ಯ ಪ್ರೀತಿ ಝಿಂಟಾ ಸನ್ನಿ ಡಿಯೋಲ್ ಗೆ ನಾಯಕಿಯಾಗಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.