ಮನೋರಂಜನೆ

ಎನಿ ಟೈಮ್ ಮುದ್ರಾ (ATM)

Pinterest LinkedIn Tumblr

yoga‘ಸೂಪರ್’ ಎಂಬ ರಿಯಲ್ ಸ್ಟಾರ್ ಉಪೇಂದ್ರರ ಚಿತ್ರವನ್ನು ನೀವು ನೋಡಿಲ್ಲದಿದ್ದ ಪಕ್ಷದಲ್ಲಿ ಚಿತ್ರದ ವಾಲ್ ಪೋಸ್ಟ್ ನಂತೂ ಖಂಡಿತವಾಗಿಯೂ ನೋಡಿಯೇ ಇರುತ್ತೀರಿ. ಅಸಲಿಗೆ ಉಪೇಂದ್ರರು ಆ ಚಿತ್ರಕ್ಕೆ ಅಕ್ಷರಗಳಲ್ಲಿ ಹೆಸರನ್ನೇ ಇಟ್ಟಿಲ್ಲ! ನಾವೆಲ್ಲ ವಾಲ್ ಪೋಸ್ಟ್ ನೋಡಿ ‘ಸೂಪರ್’ ಅಂತ ನಾಮಕರಣ ಮಾಡಿದೆವಷ್ಟೇ. ಇದು ಅವರ ಪ್ರಚಾರ ತಂತ್ರದ ವಿಭಿನ್ನ ಶೈಲಿ.

ನೀವೀಗ ಓದಲಿರುವ ಲೇಖನದ ವಿಷಯ ಮತ್ತು ಆ ಚಿತ್ರದ ವಾಲ್ ಪೋಸ್ಟರ್ಗೆ ಕನೆಕ್ಷನ್ ಇದ್ದುದ್ದರಿಂದಲೇ, ಸುಲಭವಾಗಿ ಅರ್ಥವಾಗಲಿ ಎಂಬ ದೃಷ್ಠಿಯಿಂದ ಈ ರೀತಿಯ ಪೀಠಿಕೆಯನ್ನು ಹಾಕಬೇಕಾಯಿತು.

ಸೂಪರ್ ಚಿತ್ರದ ವಾಲ್ ಪೋಸ್ಟರ್ ನಲ್ಲಿ ನಮಗೆಲ್ಲ ಕಾಣುವುದೇನೆಂದರೆ ಹೆಬ್ಬೆರಳು ಮತ್ತು ತೋರುಬೆರಳ ತುದಿಗಳನ್ನು ಸೇರಿಸಿ ಉಳಿದ ಮೂರು ಬೆರಳುಗಳನ್ನು ನೇರವಾಗಿಟ್ಟಿರುವುದು. ಇದು ಚಿಕ್ಕ ಮಕ್ಕಳಾದಿಯಾಗಿ  ಎಲ್ಲರಿಗೂ ಗೊತ್ತಿರುವ ವಿಚಾರವಷ್ಟೆ. ಈಗ ವಿಚಾರ ಅದಲ್ಲ ಬಿಡಿ, ಕೆಲವೇ ಜನರಿಗಷ್ಟೇ ಗೊತ್ತಿರುವ ವಿಚಾರವೆಂದರೆ ನಮ್ಮ ಎರಡೂ ಕೈಗಳಲ್ಲಿ ಆ ರೀತಿ ಹೆಬ್ಬೆರಳು ಮತ್ತು ತೋರುಬೆರಳನ್ನ ಸೇರಿಸಿ ನೇರವಾಗಿ ಒಂದಡೆ ಕುಳಿತು ದೀರ್ಘವಾದ ಉಸಿರಾಟವನ್ನು ಮುಂದುವರೆಸಿ, ಕಣ್ಣುಮುಚ್ಚಿ, ಮೈ ಮರೆತು ಹತ್ತು – ಹದಿನೈದು ನಿಮಿಷ ಅಲುಗಾಡದೇ ಯೋಚನಾರಹಿತರಾಗಿ ಕುಳಿತಿದ್ದರೆ ಸಾಕು, ನಿಮ್ಮಲ್ಲಿ ಆರೋಗ್ಯದ ಚಿಲುಮೆ ಚಿಮ್ಮಲಾರಂಭಿಸುತ್ತದೆ. ಮಾನಸಿಕ, ದೈಹಿಕ ನೆಮ್ಮದಿ, ಶಾಂತಿಗಳು ಲಭಿಸಲಾರಂಭಿಸಿ, ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಇದನ್ನೇ ‘ಮುದ್ರಾಯೋಗ’ ಎಂದು ಕರೆಯುತ್ತಾರೆ.

ಮುದ್ರಾ ವಿಜ್ಞಾನವು ಅಷ್ಟಾಂಗ ಯೋಗದ ಒಂದು ಭಾಗವಾಗಿದೆ. ಮುದ್ರಾಯೋಗ ಅಭ್ಯಾಸವು ಇಂದು ವಿಶ್ವಪ್ರಸಿದ್ದಿಯಾಗಿದೆ. ವಿಜ್ಞಾನ ಎಂದು ಕರೆದಿರಬಹುದಾದರೆ ಅಂತಹ ಮಹತ್ವದ್ದೇನಿದೆ? ಈ ಮುದ್ರಾಯೋಗದಲ್ಲಿ ಎಂಬ ಪ್ರಶ್ನೆ ಮೂಡುವುದು ಸಹಜ. ಇದು ಇಂದು ನಿನ್ನೆಯದಲ್ಲ, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ವಿದ್ಯೆಯ ಅಧ್ಯಯನವನ್ನು, ಅಭ್ಯಾಸವನ್ನು ಋಷಿಮುನಿಗಳಾದಿಯಾಗಿ ಇಂದಿನ ಆಧುನಿಕ ಯುಗದಲ್ಲಿಯೂ ಸಹ ಪಾಲಿಸಿಕೊಂಡು ಬರಲಾಗುತ್ತಿದೆ.

ಜಪಾನ್, ಚೀನಾ, ಶ್ರೀಲಂಕಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಈ ವಿದ್ಯೆ ವೈಜ್ಞಾನಿಕ ಹಿನ್ನೆಲೆ ಮತ್ತು ಮಹತ್ವವನ್ನು ಹೊಂದಿದೆ. ಹಸ್ತದ ಐದು ಬೆರಳುಗಳಿಂದ ವಿವಿಧ ವಿನ್ಯಾಸಗಳನ್ನು ಮಾಡುವುದರಿಂದ, ನಿರಂತರ ಅಭ್ಯಾಸದಿಂದ  ಹಲವಾರು ದೈಹಿಕ, ಮಾನಸಿಕ ಒತ್ತಡಜನ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂಬುದನ್ನು ಇಂದಿನ ಆಧುನಿಕ ವಿಜ್ಞಾನ ಸಹ ಒಪ್ಪಿಕೊಡಿದೆ. ಕ್ಯಾನ್ಸರ್ ನಂತಹ ಭಯಂಕರ ರೋಗವು ಸಹ ಮುದ್ರೆಯ ನಿರಂತರ ಅಭ್ಯಾಸದಿಂದ ದೂರವಾಗಿದೆಯೆಂದರೆ ಇದರ ಮಹತ್ವ ಅರ್ಥವಾದೀತು.

ದೆಹಲಿಯ ವಿವೇಕಾನಂದ ಯೋಗ ಆಶ್ರಮದಲ್ಲಿ ಒಂದಲ್ಲ, ನೂರಾರು ಪ್ರಯೋಗಗಳು ನಡೆದಿದ್ದು, ಕರಾರುವಾಕ್ಕಾದ ಸಕಾರಾತ್ಮಕ ಫಲಿತಾಂಶ ಹೊರಹೊಮ್ಮಿದೆ. ಮುದ್ರೆಗಳ ಅಭ್ಯಾಸ ಅಷ್ಟೊಂದು ಪವರ್ ಫುಲ್ ಎಂಬುದಕ್ಕೆ ಬೇಕಾದಷ್ಟು ಪುರಾವೆಗಳು ದೊರಕುತ್ತವೆ. ಮುದ್ರೆಗಳ ಅಭ್ಯಾಸದಿಂದ ಮಾನವನ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸಂಶೋಧನೆ, ಅಧ್ಯಯನವನ್ನು ಕಳೆದ 45 ವರ್ಷಗಳಿಂದ ಕೈಗೊಂಡಿರುವ ದೆಹಲಿಯ ಶ್ರೀ ಕೇಶವ ದೇವ್ (ವಿವೇಕಾನಂದ ಆಶ್ರಮ) ರವರು ಇಂದು ವಿಶ್ವಪ್ರಸಿದ್ದಿಯನ್ನು ಪಡೆದಿದ್ದಾರೆ.

ಇವರು ದೇಶ-ವಿದೇಶಗಳಲ್ಲಿ ಶಿಷ್ಯವೃಂದವನ್ನು ಹೊಂದಿದ್ದಾರೆ, ಇವರ ಅನೇಕ ಪುಸ್ತಕಗಳು ಮರು ಮುದ್ರಣಗಳನ್ನು ಕಂಡಿವೆ. ಇವರ ನೇರಶಿಷ್ಯರಲ್ಲಿ ಒಬ್ಬರಾದ ಶ್ರೀಮತಿ ಸುಮನ್ ಚಿಪ್ಳೂಣಕರ್ ‘ಮುದ್ರಾ ವಿಜ್ಞಾನ’ ಪುಸ್ತಕವೂ ಸುಮಾರು 12 ಮುದ್ರಣಗಳನ್ನು ಕಂಡಿದೆಯೆಂದರೆ (ಈಗ ಅಲಭ್ಯ) ಮುದ್ರ ವಿಜ್ಞಾನದ ಜನಪ್ರಿಯತೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಸುಲಭವಾಗಿ ಓದಿ ಅರ್ಥ ಮಾಡಿಕೊಂಡು ಅಭ್ಯಾಸ ಮಾಡಬಹುದಾದ ಈ ಪುಸ್ತಕವೇ ನನಗೂ ಪ್ರೇರಣೆ ನೀಡಿದ್ದು ಒಂದರ್ಥದಲ್ಲಿ ಮೈ ಕೈ ಮಣಿಸಬೇಕಿಲ್ಲದ, ಬೆವರು ಸುರಿಸಬೇಕಿಲ್ಲದ, ಹೊತ್ತು ಗೊತ್ತು ಇಲ್ಲದೇ ನೆನೆಸಿಕೊಂಡಾಗಲೆಲ್ಲಾ ಯಾವಾಗ ಬೇಕಿದ್ದರೂ ಮಾಡಬಹುದಾದ ಆರೋಗ್ಯಕರ ಅಭ್ಯಾಸವೇ ಮುದ್ರೆ. ಇನ್ನೂ ಸಿಂಪಲ್ಲಾಗಿ ಹೇಳಬಹುದಾದರೆ Any Time Mudra (ATM) ಮಾಡಬಹುದಾಗಿದೆ ಅಂದರೆ So ಇಂಟ್ರಸ್ಟಿಂಗ್  ಅಲ್ವೇ. ಕಲಿಬೇಕು ಅನ್ನೋ ಹಂಬಲ ನಿಮ್ಮಲ್ಲಿದ್ದರೆ, ಕಲಿಸಬೇಕು ಅನ್ನೋ ತುಡಿತ ನನಗಿದೆ. ಕನಿಷ್ಟ 15-20 ಜನರ ಒಂದು ಬ್ಯಾಚ್ ಇದ್ರೆ ಕರೆಮಾಡಿ (98866 74375) ಹುಮ್ಮಸ್ಸಿನಿಂದ ಕಲಿಸಬಹುದು- ಕಲಿಯಬಹುದು.

ಲೇಖನ – ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್.ಶೆಟ್ಟರ್

ಕಣಾದ ಯೋಗ  ರಿಸರ್ಚ್ ಫೌಂಡೇಶನ್ (ರಿ.),

ದುರ್ಗಿಗುಡಿ,  ಶಿವಮೊಗ್ಗ.

ಮೊ : 98866 74375

Write A Comment