ಬಾಲಿವುಡ್ ನ ಪ್ರಖ್ಯಾತ ನಟ ಅಮೀರ್ ಖಾನ್ ಕಣ್ಣೀರಿಟ್ಟ ಘಟನೆ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ.
ಹೌದು.ಇಮ್ರಾನ್ ಖಾನ್ ಅಭಿನಯಸಿದ ಕಟ್ಟಿ ಬಟ್ಟಿ ಸಿನಿಮಾವನ್ನು ಚಿತ್ರದ ನಿರ್ದೇಶಕರು ಅಮೀರ್ ಖಾನ್ ಅವರಿಗೆ ತೋರಿಸಿದರಂತೆ. ತಮ್ಮ ಅಳಿಯನಾಗಿರುವ ಇಮ್ರಾನ್ ಖಾನ್ ಅಭಿನಯವನ್ನು ವೀಕ್ಷಿಸಿದ ಅಮೀರ್ ಕಣ್ಣೀರು ಹಾಕಿದ್ದಾರೆ. ಅದರಲ್ಲಿಯೂ ಕೊನೆಯ 22 ನಿಮಿಷವಂತೂ ಎಳೆಯ ಮಗುವಿನಂತೆ ಅಳುತ್ತಲೇ ಚಿತ್ರವನ್ನು ವೀಕ್ಷಿಸಿದ್ದು ಅಮೀರ್ ಅವರ ಈ ಭಾವುಕತೆಗೆ ಸ್ವತಃ ನಿರ್ದೇಶಕರು ದಂಗಾಗಿದ್ದಾರೆ.
ಲೀವಿಂಗ್ ಇನ್ ರಿಲೇಷನ್ ಆಧಾರಿತ ಈ ಸಿನಿಮಾದಲ್ಲಿ ಕಂಗನಾ ಹಾಗೂ ಇಮ್ರಾನ್ ಖಾನ್ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿದ್ದು ಸೆಪ್ಟಂಬರ್ 18 ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಹಿಂದೆಯೂ ಮೂರು ಬಾರಿ ನೋಡಿರುವ ಅಮೀರ್ ಖಾನ್ ಕೆಲವು ಸಲಹೆಗಳನ್ನೂ ನೀಡಿದ್ದರಂತೆ.