ಕನ್ನಡದ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ‘ದೂದ್ ಪೇಡಾ’ ದಿಗಂತ್ ಅವರನ್ನು ಬಾಲಿವುಡ್ ನ ಪ್ರಖ್ಯಾತ ನಟ ಅಮಿತಾಬ್ ಬಚ್ಚನ್ ಹಾಡಿಹೊಗಳಿದ್ದಾರೆ.
ಕನ್ನಡದ ನಟ ದಿಗಂತ ನಟನೆಯ ವೆಡ್ಡಿಂಗ್ ಪುಲಾವ್ ಚಿತ್ರದ ಟ್ರೇಲರ್ ಅನ್ನು ನೋಡಿದ ಬಿಗ್ ಬಿ ಮನಸಾರೆ ಮೆಚ್ಚಿಕೊಂಡಿದ್ದು ಟ್ರೇಲರ್ ಅತ್ಯಂತ ಚೆನ್ನಾಗಿ ಮೂಡಿ ಬಂದಿದೆ ಎಂದು ಟ್ವಿಟ್ಟರ್‍ನಲ್ಲಿ ಶ್ಲಾಘಿಸಿದ್ದು ಟ್ರೇಲರ್ ಲಿಂಕ್ ಶೇರ್ ಮಾಡಿ ಚಿತ್ರವನ್ನು ಪ್ರೋತ್ಸಾಹಿಸುವಂತೆ ಫಾಲೋವರ್‍ಗಳಿಗೆ ಮನವಿ ಮಾಡಿದ್ದಾರೆ.
ಕನ್ನಡದ ಗುಳಿಕೆನ್ನೆ ಹುಡುಗ ದಿಗಂತ್‍ನ ಮೊದಲ ಹಿಂದಿ ಚಿತ್ರವಾದ ವೆಡ್ಡಿಂಗ್ ಪಲಾವ್ ಚಿತ್ರದ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದ್ದು ಈ ಟ್ವೀಟ್‍ನಿಂದ ಸಂತಸಗೊಂಡಿರುವ ದಿಗಂತ್ ಬಾಲಿವುಡ್ ಉತ್ತಮ ನಟ ಅಮಿತಾಬ್ ಶುಭಹಾರೈಕೆ ಸಿಕ್ಕಿರುವುದು ಖುಷಿತಂದಿದೆ. ಇದಕ್ಕಿಂತ ಇನ್ನೇನು ಬೇಕು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.