ಮನೋರಂಜನೆ

ವಿಜಯ್ ಮಲ್ಯ ಪಾತ್ರ ಆ ಸಿನಿಮಾದಲ್ಲುಂಟಾ?

Pinterest LinkedIn Tumblr

malya-madhurವರುಷದ ಕೊನೆಯಲ್ಲಿ ವಿಜೃಂಭಿಸುವ ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಉದ್ಯಮಿ ವಿಜಯ್ ಮಲ್ಯ ಅವರ ಹಾಟ್ ಪರಿಕಲ್ಪನೆ.

ಪರೋಕ್ಷವಾಗಿ ವಿಜಯ್ ಮಲ್ಯ ಈಗೊಂದು ಸಿನಿಮಾಕ್ಕೆ ಕಾರಣ ಆಗಿದ್ದಾರೆ. ಹೇಗೆ ಗೊತ್ತಾ? ಈ ಹಿಂದೆ `ಫ್ಯಶನ್’ ಸಿನಿಮಾವನ್ನು ನಿರ್ದೇಶಿಸಿ ಗಮನ ಸೆಳೆದ ಮಧುರ್ ಭಂಡಾರ್ಕರ್ ಅವರ ಮುಂದಿನ ಚಿತ್ರ `ಕ್ಯಾಲೆಂಡರ್ ಗರ್ಲ್ಸ್’. ಇದು ಕೂಡ ಮಾಡೆಲ್ ಜಗತ್ತಿನ ಸ್ಟೋರಿ. ಕಿಂಗ್ ಫಿಶರ್ ಕ್ಯಾಲೆಂಡರ್‍ಗೆ ಪೋಸು ಕೊಟ್ಟ ಐದು ಮಾಡೆಲ್ಗಳ ನೈಜ ಕತೆ ಇದಂತೆ. ಈ ಸಂಬಂಧ ಭಂಡಾರ್ಕರ್, ಮಲ್ಯ ಅವರೊಟ್ಟಿಗೆ ಕತೆಯನ್ನು ಹಂಚಿಕೊಂಡಿದ್ದಾರಂತೆ.

ಭಂಡಾರ್ಕರ್ ಈ ಸಿನಿಮಾದಲ್ಲಿ ವಿಜಯ್ ಮಲ್ಯ ಪಾತ್ರವನ್ನೂ ಸೃಷ್ಟಿಸಿದ್ದಾರೆ ಅನ್ನೋದು ಈಗ ಸಂಚಲನ ಸೃಷ್ಟಿಸಿರುವ ವಿಚಾರ. ಶೇ.75 ಕಥೆ ರಿಯಲ್, ಶೇ. 25 ರೀಲು ಎಂದು ನಗುವ ಭಂಡಾರ್ಕರ್ ಆ 5 ಮಾಡೆಲ್ಗಳ ಹೆಸರನ್ನು ಬಾಯಿಬಿಟ್ಟಿಲ್ಲ. ಬಹುಶಃ ಅದು ವಿಜಯ ಮಲ್ಯ ಅವರಿಗೂ ಗೊತ್ತಿಲ್ಲ. ಕೇವಲ ಇಲ್ಲಿ ಕ್ಯಾಲೆಂಡರ್ ಹುಡುಗಿಯರ ಕಷ್ಟನಷ್ಟ ಅಷ್ಟೇ ಅಲ್ಲ, ಅವರ ಚಿತ್ರ ತೆಗೆಯುವ ಫೋಟೋಗ್ರಾಫರ್ ಗಳ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲುತ್ತದಂತೆ.

ಆಕಾಂಕ್ಷಾ ಪುರಿ, ಅವನಿ ಮೋದಿ ಇನ್ನಿತರ ಕಿಂಗ್ ಫಿಶರ್ ಮಾಡೆಲ್ ಗಳು ನಟಿಸಿರುವ ಈ ಚಿತ್ರ ಸೆಪ್ಟೆಂಬರ್ 25ಕ್ಕೆ ತೆರೆಕಾಣಲಿದೆ.

Write A Comment