ಖ್ಯಾತ ನಟ ಪ್ರಕಾಶ್ ರಾಜ್ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಚೆನ್ನೈನ ಮಹಿಳೆಯೊಬ್ಬರು ಪ್ರಕಾಶ್ ರಾಜ್ ವಿರುದ್ದ ಮದ್ರಾಸ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಪ್ರಕಾಶ್ ರಾಜ್ ಭಾಗವಹಿಸಿರುವ ಜಾಹೀರಾತೊಂದರಲ್ಲಿ ಮಹಿಳೆಯರನ್ನು ಅವಮಾನಿಸುವಂತಹ ಅಂಶಗಳಿವೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆ ಆರೋಪಿಸಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಅಲ್ಲದೇ ಈ ಜಾಹೀರಾತಿನ ಹೋರ್ಡಿಂಗ್ಸ್ ಗಳು ರಾಜ್ಯದ ಹಲವೆಡೆ ಹಾಕಲಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ಸೂಚಿಸಬೇಕು ಹಾಗೂ ಟಿವಿ ಯಲ್ಲಿ ಬರುತ್ತಿರುವ ಈ ಜಾಹೀರಾತನ್ನು ತಕ್ಷಣದಿಂದಲೇ ಹಿಂಪಡೆಯಬೇಕೆಂದು ತಮ್ಮ ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.