ಕೆಲವರ ವರ್ತನೆಯೇ ವಿಚಿತ್ರವಾಗಿರುತ್ತದೆ. ಅದು ಮಾನಸಿಕ ಅಸ್ವಸ್ಥತೆಯೇ ಅಥವಾ ವಿಕೃತಿಯ ಪ್ರದರ್ಶನವೋ ಗೊತ್ತಾಗುವುದಿಲ್ಲ. ಇಲ್ಲೊಬ್ಬ ಪದೇ ಪದೇ ಇಂತಹ ಕೆಲಸ ಮಾಡಿ ಸಿಕ್ಕಿ ಬಿದ್ದರೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ.
ಅಮೆರಿಕಾದ ವರ್ಜಿನಿಯಾ ಪ್ರಾಂತ್ಯದ ಜೇಮ್ಸ್ ಸಿಟಿ ಕೌಂಟಿ ನಿವಾಸಿ ಹಿ ಹ್ಯೂನ್ ಜಿಯೊನ್ ಎಂಬ 28 ವರ್ಷದ ವ್ಯಕ್ತಿ, ಮಹಿಳೆಯರ ಮುಂದೆ ತನ್ನ ಗುಪ್ತಾಂಗಗಳನ್ನು ಪ್ರದರ್ಶಿಸುವ ವಿಕೃತ ಚಾಳಿ ಬೆಳೆಸಿಕೊಂಡಿದ್ದಾನೆ.
ಒಂದು ವಾರದ ಹಿಂದಷ್ಟೇ ಯುವತಿಯೊಬ್ಬಳ ಮುಂದೆ ತನ್ನ ಗುಪ್ತಾಂಗ ಪ್ರದರ್ಶಿಸಿ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡಿದ್ದ ಹಿ ಹ್ಯೂನ್ ಜಿಯೊನ್ ಮತ್ತೆ ಅದೇ ಕೆಲಸ ಮಾಡಿದ್ದಾನೆ. ಈಗ ಮಹಿಳೆಯೊಬ್ಬರ ಮುಂದೆ ತನ್ನ ಅಂಗಾಂಗ ಪ್ರದರ್ಶಿಸಿ ಬಂಧನಕ್ಕೊಳಗಾಗಿದ್ದಾನೆ. ಪದೇ ಪದೇ ಈತ ಇಂತಹ ಕೃತ್ಯ ಮಾಡುತ್ತಿರುವ ಕಾರಣ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.