ಅಂತರಾಷ್ಟ್ರೀಯ

ದುಬಾರಿ ಬೆಲೆಯ ಫೆರಾರಿ ಕಾರಿಗೆ ಬೆಂಕಿ ಇಟ್ಟ ಭೂಪ !

Pinterest LinkedIn Tumblr

carಶ್ರೀಮಂತ ವ್ಯಕ್ತಿಯೊಬ್ಬನ ಪುತ್ರನೊಬ್ಬ ತನ್ನ ದುಬಾರಿ ಬೆಲೆಯ ಫೆರಾರಿ ಕಾರಿಗೆ ಬೆಂಕಿ ಇಟ್ಟು ಇದೀಗ ಜೈಲು ಪಾಲಾಗಿದ್ದಾನೆ. ಅಷ್ಟಕ್ಕೂ ಈತ ತನ್ನ ಕಾರಿಗೆ ಬೆಂಕಿ ಹಚ್ಚಿದ್ದು ಯಾಕೆ ಅಂತೀರಾ. ಈ ಸ್ಟೋರಿ ಓದಿ.

ಈ 20 ವರ್ಷದ ಯುವಕ ಸ್ವಿಜ್ಜರ್ಲ್ಯಾಂಡಿನ ಅತ್ಯಂತ ಶ್ರೀಮಂತ ವ್ಯಕ್ತಿಯ ಪುತ್ರ. ಈತನ ಬಳಿ 15 ದುಬಾರಿ ಬೆಲೆಯ ಐಷಾರಾಮಿ ಸ್ಪೋರ್ಟ್ಸ್ ಕಾರುಗಳಿದ್ದು, ಇವುಗಳ ಪೈಕಿ ತನ್ನ ತಂದೆ ಪ್ರೀತಿಯಿಂದ ಕಾಣಿಕೆಯಾಗಿ ನೀಡಿದ್ದ ಫೆರಾರಿ 458 ಕಾರಿಗೆ ಬೆಂಕಿ ಹಚ್ಚಿದ್ದಾನೆ.

ಈತನಿಗೆ ಇತ್ತೀಚೆಗೆ ಮಾರುಕಟ್ಟೆಗೆ ಬಂದ ಹೊಸ ಕಾರು ಖರೀದಿಸಬೇಕಾಗಿತ್ತಂತೆ. ಈಗಾಗಲೇ ತನ್ನ ಬಳಿ 15 ಕಾರುಗಳಿದ್ದ ಕಾರಣ ತಂದೆ ಬಳಿ ಹಣ ಕೇಳಲು ಭಯವಾಗಿ ಕಾರಿಗೆ ಬೆಂಕಿ ಹಚ್ಚಿ ಅದನ್ನು ಆಕಸ್ಮಿಕವಾಗಿ ನಡೆದ ಘಟನೆ ಎಂಬಂತೆ ಬಿಂಬಿಸುವ ಮೂಲಕ ಇನ್ಶೂರೆನ್ಸ್ ಹಣ ಪಡೆಯಲು ಹಂಚಿಕೆ ಮಾಡಿದ್ದಾನೆ.

ಇನ್ಶೂರೆನ್ಸ್ ಹಣ ಬಂದ ಬಳಿಕ ಆ ಹಣದಲ್ಲಿ ಹೊಸ ಕಾರು ಖರೀದಿಸುವುದು ಆತನ ಹಂಚಿಕೆಯಾಗಿತ್ತು. ಆದರೆ ಪೊಲೀಸರು ಆತನ ಸಂಚನ್ನು ಬಯಲುಗೊಳಿಸಿದ್ದಾರಲ್ಲದೇ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇತ್ತ ಹಳೆ ಕಾರನ್ನೂ ಕಳೆದುಕೊಂಡಿದ್ದಲ್ಲದೇ ಈಗ ಜೈಲು ಪಾಲಾಗುವಂತಾಗಿದೆ.

Write A Comment