ಮನೋರಂಜನೆ

ದೀಪಿಕೆಗಾಗಿ ರಣವೀರ್ ಕಾಲಹರಣ?

Pinterest LinkedIn Tumblr

ranveerಸ್ಟಾರ್ ನಟರ ಜೀವನದಲ್ಲಿ ಒಂದೊಂದು ನಿಮಿಷಯೂ ಬೆಲೆಬಾಳುವಂಥದ್ದು. ಗಂಟೆಗಳ ಲೆಕ್ಕದಲ್ಲಿ ನಿರ್ವಪಕರು ಕಾಲ್​ಶೀಟ್ ಪಡೆಯಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ರಣವೀರ್ ಸಿಂಗ್ ಸುಖಾಸುಮ್ಮನೆ ಕಾಲಹರಣ ಮಾಡುತ್ತಾರೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಅಚ್ಚರಿಯ ವಿಷಯವೇನೆಂದರೆ, ಅವರು ಹೀಗೆ ಟೈಮ್ೇಸ್ಟ್ ಮಾಡಲು ಕಾರಣ ದೀಪಿಕಾ ಪಡುಕೋಣೆ!!

ಖಾಸಗಿ ಕೆಲಸದ ಸಲುವಾಗಿ ವಿದೇಶಕ್ಕೆ ಹಾರಿದ್ದ ದೀಪಿಕಾ ಮೊನ್ನೆ ಭಾರತಕ್ಕೆ ವಾಪಸ್ಸಾಗಿದ್ದಾರೆ. ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಯೋಜನೆ ಹಾಕಿಕೊಂಡಿದ್ದರು ರಣವೀರ್. ಹಾಗಾಗಿ ಮಧ್ಯರಾತ್ರಿಯೇ ವಿಮಾನ ನಿಲ್ದಾಣಕ್ಕೆ ಬಂದ ಅವರು ಗಂಟೆಗಟ್ಟಲೆ ಕಾದು ಕುಳಿತಿದ್ದರಂತೆ. ಅಂದ್ಹಾಗೆ, ಡಿಪ್ಸ್ ಬಂದಿಳಿದಿದ್ದು ನಸುಕಿನ 4 ಗಂಟೆ ವೇಳೆಗೆ. ಆದರೆ ಅವರನ್ನು ಬರಮಾಡಿಕೊಳ್ಳುವ ಕಾತರದಲ್ಲಿ ಮಧ್ಯರಾತ್ರಿ 1 ಗಂಟೆಗೇ ವಿಮಾನ ನಿಲ್ದಾಣಕ್ಕೆ ಬಂದು ಠಿಕಾಣಿ ಹೂಡಿದ್ದರಂತೆ ರಣವೀರ್. ಅದಕ್ಕೂ ಮೊದಲು ನಗರದ ಹೊರವಲಯದಲ್ಲಿರುವ ಚಿತ್ರಮಂದಿರದಲ್ಲಿ ಅವರೊಬ್ಬರೇ ತಡರಾತ್ರಿ ಸಿನಿಮಾ ನೋಡಿ ಕಾಲ ಕಳೆದಿದ್ದರು ಎನ್ನುತ್ತಿವೆ ಮೂಲಗಳು. ಅಷ್ಟು ಹೊತ್ತು ಕಾದರೂ ಬೇಸರಿಸಿಕೊಳ್ಳದೇ ದೀಪಿಕಾ ಬಂದಿಳಿಯುತ್ತಿದ್ದಂತೆ ಹೂವಿನ ಗುಚ್ಚ ನೀಡಿ ಅವರಿಗೆ ಅಚ್ಚರಿ ಮೂಡಿಸಿದರಂತೆ ರಣವೀರ್.

ಡಿಪ್ಸ್ ಮತ್ತು ರಣವೀರ್ ಒಟ್ಟೊಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ತಮ್ಮಿಬ್ಬರ ಸಂಬಂಧ ಯಾವ ಬಗೆಯದು ಎಂಬುದರ ಬಗ್ಗೆ ಈ ಜೋಡಿ ಎಲ್ಲಿಯೂ ಬಾಯಿಬಿಟ್ಟಿಲ್ಲ. ಆದರೆ ಇವರಿಬ್ಬರು ಪ್ರೇಮಿಗಳೆಂಬ ಮಾತು ಮಾತ್ರ ಬಿ-ಟೌನ್​ನಲ್ಲಿ ಹರಿದಾಡುತ್ತಿದೆ.

ಏರ್​ಪೋರ್ಟ್​ನಲ್ಲಿ ದೀಪಿಕಾ ಬರುವಿಕೆಗಾಗಿ ರಣವೀರ್ ಗಂಟೆಗಟ್ಟಲೆ ಕಾದಿರುವುದು ಆ ಮಾತಿಗೆ ಪುಷ್ಟಿ ನೀಡಿದೆ.

Write A Comment