ಕರ್ನಾಟಕ

ಪಾದರಕ್ಷೆಗಳೂ ಇನ್ಮೇಲೆ ಇನ್​ಸ್ಟಂಟ್!

Pinterest LinkedIn Tumblr

padar-fiಮಹಿಳೆಯರ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಸ್ಥಳದಲ್ಲೇ ಪಾದರಕ್ಷೆ ತಯಾರಿಸಿಕೊಡುವ (ಇನ್​ಸ್ಟಂಟ್ ಪಾದರಕ್ಷೆ) ಯೋಜನೆ ಯುರೋಪಿಯನ್ ಯೂನಿಯನ್ ರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಚಾಲ್ತಿಯಲ್ಲಿದೆ.

***

‘ಚಪ್ಪಲಿ ಹುಡ್ಕೊಂಡು ಮೂರ್ನಾಲ್ಕು ಫೂಟ್​ವೇರ್ ಅಂಗಡಿಗೆ ಹೋದೆ ಕಣೆ. ಆದ್ರೆ ಸರಿಯಾದ್ದು ಒಂದೂ ಸಿಗ್ಲಿಲ್ಲ. ಒಂದ್ ಅಂಗಡೀಲಿ ಒಳ್ಳೆ ಡಿಸೈನ್ ಇತ್ತು, ಆದ್ರೆ ನನ್ ಸೈಝå್ ಇರ್ಲಿಲ್ಲ. ಇನ್ನೊಂದು ಅಂಗಡೀಲಿ ಡಿಸೈನ್ ಚೆನ್ನಾಗಿರ್ಲಿಲ್ಲ.. ಛೆ.. ಇನ್ನೆಲ್ಲೀಂತ ಹುಡ್ಕೊಂಡು ಹೋಗೋದು..’

ಹೀಗೆನ್ನುತ್ತ ನಿಡುಸುಯ್ದು ಮಾತನಾಡೋ ಯುವತಿಯರು, ಸ್ತ್ರೀಯರನ್ನು ಅಕ್ಕಪಕ್ಕದಲ್ಲಿ ಗಮನಿಸಿಯೇ ಇರುತ್ತೀರಾ. ಆದರೆ, ಇನ್ಮೇಲೆ ಇಂತಹ ಗೋಳು, ನಿರಾಸೆ ಬೇಕಿಲ್ಲ. ಶೀಘ್ರವೇ ಇವುಗಳಿಗೆಲ್ಲ ಪರಿಹಾರ ಸಿಗುವಂತಹ ಬೆಳವಣಿಗೆ ಯುರೋಪಿಯನ್ ಯೂನಿಯನ್ ರಾಷ್ಟ್ರಗಳಲ್ಲಿ ನಡೆಯುತ್ತಿದೆ. ವಿಶೇಷವಾಗಿ ಮಹಿಳೆಯರ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಸ್ಥಳದಲ್ಲೇ ಪಾದರಕ್ಷೆ ತಯಾರಿಸಿಕೊಡುವ (ಇನ್​ಸ್ಟಂಟ್ ಪಾದರಕ್ಷೆ) ಯೋಜನೆ ಯುರೋಪಿಯನ್ ಯೂನಿಯನ್ ರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಚಾಲ್ತಿಯಲ್ಲಿದೆ.

ಏನಿದು ಯೋಜನೆ?

ಸ್ತ್ರೀಯರ ಸಮಸ್ಯೆಯನ್ನು ಅರ್ಥಮಾಡಿಕೊಂಡ ಕೆಲವರು, ಯುರೋಪಿಯನ್ ಯೂನಿಯನ್ ರಾಷ್ಟ್ರಗಳ ಹಣಕಾಸು ನೆರವಿನೊಂದಿಗೆ ಈಛಿಞಟ ಖಜಟಟ ಐಠಠಿಚ್ಞಠಿ ಖಜಟಛಿ ಟ್ಟಟ್ಜಛ್ಚಿಠಿ ಎಂಬ ಯೋಜನೆಯನ್ನು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿದ್ದರು. ಸ್ತ್ರೀಯರ ಪಾದಕ್ಕೆ ಹೊಂದುವಂತಹ ಚರ್ಮ ಹಾಗೂ ನಿತಿನಾಲ್ ಮೆಟೀರಿಯಲ್​ಗಳನ್ನು ಒಳಗೊಂಡ ಕಚ್ಚಾವಸ್ತುವಿನಿಂದ ತಯಾರಿಸಿದ ಪಾದರಕ್ಷೆಗಳನ್ನು ಸ್ಥಳದಲ್ಲೇ ಸಿದ್ಧಪಡಿಸುವ ಯೋಜನೆ ಇದು. ಬಯೋಮೆಕಾನಿಕ್ಸ್ ಇನ್​ಸ್ಟಿಟ್ಯೂಟ್ ಆಫ್ ವಲೆನ್ಸಿಯಾ(ಐಬಿವಿ) ಮತ್ತು ಕಲ್ಝಮೆಡಿ, ಟೆಕ್ಸಿನೋವ್(ಲೈಆನ್), ಸ್ವಿಜರ್ಲೆಂಡ್​ನ ನಿಮೆಸಿಸ್(ಸ್ಟ್ರಾಸ್​ಬೌರ್ಗ್), ಟೆಕ್ನೋಬೂಟ್ಸ್, ಪೋರ್ಚುಗಲ್​ನ ಓತೋಪೀಡಿಯಾಸ್ ಟ್ವಿನ್ಸ್ ಈ ಯೋಜನೆಯ ಪಾಲುದಾರ ಸಂಸ್ಥೆಗಳು. 2012ರ ಫೆಬ್ರವರಿಯಿಂದ ಈ ಯೋಜನೆ ಜಾರಿಯಲ್ಲಿದ್ದು, ಮಾದರಿ ಯಂತ್ರವನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ಸಂಸ್ಥೆಗಳು ತೊಡಗಿಕೊಂಡಿವೆ. ಈ ವರ್ಷಾಂತ್ಯಕ್ಕೆ ಫೂಟ್​ವೇರ್ ಶಾಪ್​ಗಳಲ್ಲಿ ಈ ಯಂತ್ರ ಸ್ಥಾಪಿಸುವ ಇರಾದೆ ಯೋಜನೆಯದ್ದು.

***

ಪಾದರಕ್ಷೆಗಳೆಂದ್ರೆ ಸುಮ್ನೇನಾ…?

ಹೆಸರೇ ಹೇಳುವಂತೆ ನಡೆದಾಡುವಾಗ ಕಲ್ಲು-ಮುಳ್ಳುಗಳಿಂದ ಪಾದಗಳನ್ನು ರಕ್ಷಿಸುವುದಕ್ಕೆ ಇರುವ ಸಾಧನ ಅದು. ಹಾಗಂತ ಯಾವ್ಯಾವುದೋ ಆಕಾರ, ಹೇಗೇಗೋ ಇರುವಂತಹ ಪಾದರಕ್ಷೆ ಧರಿಸಿದರೆ ನಾನಾ ರೀತಿಯ ಸಮಸ್ಯೆಗಳು ಎದುರಾಗಬಹುದು. ಕಡಿಮೆ ಅಳತೆಯ ಪಾದರಕ್ಷೆ ಧರಿಸಿದರೆ, ಬೆರಳುಗಳ ಸಮಸ್ಯೆ, ಚರ್ಮ ಕಿತ್ತು ಹೋಗುವುದು, ನೋವು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಅದೇ ರೀತಿ ವಿಚಿತ್ರ ಆಕಾರದ ಚಪ್ಪಲಿ ಧರಿಸುವುದರಿಂದ ಶರೀರದ ಸಮತೋಲನ ಕಾಯ್ದುಕೊಳ್ಳಲಾಗದೆ ಇತರೆ ಕೆಲವು ಸಮಸ್ಯೆಗಳು ಉದ್ಭವಿಸುವುದು ಸಹಜ. ಈ ಎಲ್ಲ ಆರೋಗ್ಯ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಈ ಇನ್​ಸ್ಟಂಟ್ ಪಾದರಕ್ಷೆ ಯೋಜನೆ ಚಾಲನೆ ಪಡೆದುಕೊಂಡಿದೆ.

***

ಸ್ಥಳದಲ್ಲೇ ಹೇಗೆ ಸಾಧ್ಯ?

ಎಲ್ಲಿಂದ ಎಲ್ಲಿಗೆ ಬೇಕಾದರೂ ಸುಲಭವಾಗಿ ಕೈಯಲ್ಲೇ ಹಿಡಿದು ಸಾಗಿಸಬಹುದಾದ ಪುಟ್ಟ ಯಂತ್ರವೊಂದು ಈ ಯೋಜನೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದನ್ನು ಶಾಪ್​ಟೂಲ್ ಎನ್ನಲಾಗುತ್ತಿದ್ದು, ಇದರಲ್ಲಿ ಶಾಪ್​ಇನ್​ಸ್ಟಂಟ್​ಶೂ ಪೋರ್ಟೆಬಲ್ ಸ್ಕ್ಯಾನರ್ ಕೂಡ ಇದೆ. ಈ ಹೊಸ ಇನ್​ಸ್ಟಂಟ್​ಶಾಪ್ ಟೂಲ್, ಹಗುರವಾಗಿದ್ದು ಆಕರ್ಷಕವಾಗಿಯೂ ಇದೆ. ಹೆಚ್ಚೇನೂ ಕಷ್ಟವಿಲ್ಲದೆ ಪಾದರಕ್ಷೆಯ ಅಂಗಡಿಗಳಲ್ಲಿ ಇದನ್ನು ಅಳವಡಿಸಬಹುದು. ಬಯೋಮೆಕಾನಿಕ್ಸ್ ಇನ್​ಸ್ಟಿಟ್ಯೂಟ್ ಆಫ್ ವಲೆನ್ಸಿಯಾ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಪಾದರಕ್ಷೆ ತಯಾರಿಗೆ ಎಷ್ಟು ಸಮಯ ತಗಲುತ್ತದೆ ಎಂಬ ವಿಷಯ ಬಹಿರಂಗವಾಗಿಲ್ಲ.

***

ಮೆಮೊರಿ ಶೂಗಳು

ಈ ರೀತಿಯಲ್ಲಿ ತಯಾರಾಗುವ ಪಾದರಕ್ಷೆಗಳಿಗೆ ಮೆಮೊರಿ ಶೂ ಎನ್ನುತ್ತಾರೆ. ಸ್ತ್ರೀಯರ ಪಾದದ ಅಳತೆ ಸ್ಕ್ಯಾನ್ ಮಾಡಿದ ಅದನ್ನು ಗ್ರಹಿಸಿ ತನ್ನ ನೆನಪಿನಲ್ಲಿ ಉಳಿಸಿಕೊಳ್ಳುವ ಸಾಫ್ಟ್​ವೇರ್, ಫ್ಯಾಷನೆಬಲ್ ಪಾದರಕ್ಷೆ ವಿನ್ಯಾಸಗಳನ್ನು ದಕ್ಷತೆಯೊಂದಿಗೆ ಸಿದ್ಧಪಡಿಸುತ್ತದೆ. ಪ್ರತಿಯೊಬ್ಬರ ಪಾದದಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಪ್ರಸ್ತುತ ಎಲ್ಲರೂ ಇರುವುದರಲ್ಲಿ ಕಾಲಿಗೆ ಹೊಂದುವಂತಹ, ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಹೊಂದಾಣಿಕೆ ಮಾಡಿಕೊಂಡು ಧರಿಸುವುದು ವಾಡಿಕೆ. ಆದರೆ, ಈ ಮೆಮೊರಿ ಶೂಗಳು ಹಾಗಲ್ಲ. ಕಾಲಿನ ಅಳತೆಯನ್ನು ನಿಖರವಾಗಿ ಪಡೆದು ಪಾದರಕ್ಷೆ ತಯಾರಿಸುವುದರಿಂದ ಇವು ಕಾಲಿಗೆ ಸರಿಯಾಗಿ ಹೊಂದುತ್ತವೆ. ವಿವಿಧ ರೀತಿಯ ಕಾಲಿನ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಕಾಲಿನ ಚರ್ಮದ ಅಲರ್ಜಿ, ಉಗುರುಗಳು ಬೆಂಡಾಗಿ ಬೆಳೆಯುವುದು, ಕಿರುಬೆರಳು ಮೇಲೆದ್ದು ಕುಳಿತುಕೊಳ್ಳುವುದು ಇತ್ಯಾದಿ ಸಮಸ್ಯೆಗಳಿಗೂ ಮೆಮೊರಿ ಶೂಗಳು ಪರಿಹಾರವಾಗಬಲ್ಲವು ಎಂಬುದು ತಜ್ಞರ ಅಭಿಮತ.

***

— ಟೆಕ್ ಹನಿ—-

ಪುರುಷರು, ಮಕ್ಕಳಿಗೂ

ಈ ಯೋಜನೆ ಸದ್ಯ ಸ್ತ್ರೀಯರನ್ನು ಗಮನದಲ್ಲಿರಿಸಿಕೊಂಡು ಚಾಲನೆ ಪಡೆದುಕೊಂಡಿದೆಯಾದರೂ, ಪುರುಷರು ಹಾಗೂ ಮಕ್ಕಳನ್ನು ಕಡೆಗಣಿಸಿಲ್ಲ. ಭವಿಷ್ಯದಲ್ಲಿ ಅವರ ಸಮಸ್ಯೆಗಳಿಗೂ ಇದೇ ಯೋಜನೆ ಪರಿಹಾರ ಹೇಳಲಿದೆ ಎಂಬ ವಿಶ್ವಾಸ ಹಲವರದ್ದು. ಪ್ರಸ್ತುತ ಯುರೋಪಿಯನ್ ಯೂನಿಯನ್ ರಾಷ್ಟ್ರಗಳ ಪಾದರಕ್ಷೆ ಕೈಗಾರಿಕಾ ಕ್ಷೇತ್ರ ಸ್ಪರ್ಧಾತ್ಮಕವಾಗಿದ್ದು, ಫ್ಯಾಶನ್​ಗೆ ಒತ್ತುಕೊಡುವಷ್ಟೇ ಪಾದಗಳ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂಬುದಕ್ಕೆ ಪೂರಕವಾಗಿ ಈ ಯೋಜನೆ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿದೆ. ಈ ಯೋಜನೆ ಯಶಸ್ವಿಯಾದರೆ ಫೂಟ್​ವೇರ್ ಇಂಡಸ್ಟ್ರಿಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ. ‘ಅಯ್ಯೋ! ಪಾದರಕ್ಷೆ ಅಲ್ಲವೇ? ಬಿಡಿ’ ಎಂದು ನಿರ್ಲಕ್ಷಿಸುವಂತಿಲ್ಲ. ವಿಶ್ವದ ಇತರೆ ರಾಷ್ಟ್ರಗಳು ಕೂಡ ಈ ನಿಟ್ಟಿನಲ್ಲಿ ಗಮನ ಹರಿಸುವ ಸಾಧ್ಯತೆಯೂ ದಟ್ಟವಾಗಿದೆ.

***

ಸ್ಪ್ಯಾಮ್ಳನ್ನು ಬ್ಲಾಕ್ ಮಾಡುವ ಟ್ರೂಕಾಲರ್

ಅನಾಮಿಕ ನಂಬರ್​ಗಳ ಕರೆ ಹಾಗೂ ಸ್ಪ್ಯಾಮ್​ಕರೆಗಳನ್ನು ತಡೆಯುವ ಹೊಸ ಆಪನ್ನು ಟ್ರೂಕಾಲರ್ ಕಳೆದ ವಾರ ಗ್ರಾಹಕರಿಗೆ ಪರಿಚಯಿಸಿದೆ. ಟ್ರೂಮೆಸ್ಸೆಂಜರ್ ಎಂಬ ಈ ಆಪ್ ಸದ್ಯ ಭಾರತಕ್ಕೆ ಸೀಮಿತವಾಗಿದ್ದು, ಆಂಡ್ರಾಯ್್ಡಫೋನ್ ಬಳಕೆದಾರರು ಇದರ ಪ್ರಯೋಜನ ಪಡೆಯಬಹುದು. ಟ್ರೂಕಾಲರ್ ಪ್ರಕಾರ, ನಿತ್ಯ ಬರುವ ಏಳು ಕರೆಗಳ ಪೈಕಿ ಒಂದು ಸ್ಪ್ಯಾಮ್​ಕರೆ ಇರುತ್ತದೆ. ಎಸ್ಸೆಮ್ಮೆಸ್​ಗಳಲ್ಲೂ ಸ್ಪ್ಯಾಮ್​ವೆುಸೇಜ್​ಗಳಿರುತ್ತವೆ. ಇವುಗಳನ್ನು ತಡೆಯುವುದು ಈ ಹೊಸ ಆಪ್​ನ ವಿಶೇಷತೆ ಎಂದು ಅದು ಹೇಳಿಕೊಂಡಿದೆ.

***

ಫೇಸ್​ಬುಕ್ ಪುಟದಲ್ಲಿ ಚಲಿಸುವ ವಿಡಿಯೋ!

ಖಾತೆದಾರರ ಪುಟದಲ್ಲಿ ಚಲಿಸುವ ವಿಡಿಯೋ ಜಾಹೀರಾತನ್ನು ಪರಿಚಯಿಸಲು ಫೇಸ್​ಬುಕ್ ಸಿದ್ಧತೆ ನಡೆಸಿದೆ. ಕಂಪ್ಯೂಟರ್​ನ ಬ್ರೌಸರ್ ತೆರೆದು ಫೇಸ್​ಬುಕ್ ಖಾತೆಯ ಪುಟಕ್ಕೆ ಹೋದೊಡನೆ ವಿಡಿಯೋ ಪಾಪ್​ಅಪ್ ಕಾಣಿಸುತ್ತದೆ. ಇದನ್ನು ಅನ್​ಬ್ಲಾಕ್ ಮಾಡಿದರಷ್ಟೇ, ವಿಡಿಯೋ ಬಲಭಾಗದ ಮೂಲೆಯಿಂದ ವಿಡಿಯೋ ಮೇಲಕ್ಕೆ ಚಲಿಸಿ ಕೊನೆಗೆ ಎಡಭಾಗದ ಮೂಲೆಗೆ ಬರುತ್ತದೆ. ಈ ವಿಡಿಯೋಗಳ ಮೂಲಕ ಜಾಹೀರಾತು ಪ್ರಚುರ ಪಡಿಸುವುದು ಫೇಸ್​ಬುಕ್ ಉದ್ದೇಶ. ಇದೀಗ ಪ್ರಾಯೋಗಿಕವಾಗಿ ಇದರ ಸಾಧಕ ಭಾದಕಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರವೇ ಎಲ್ಲ ಪುಟಗಳಲ್ಲೂ ಇದು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

Write A Comment