ಕರ್ನಾಟಕ

ನೀರ್ ದೋಸೆ; ಬೇಕಾಗುವ ಪದಾರ್ಥಗಳು

Pinterest LinkedIn Tumblr

neer-dosa-fiಅಕ್ಕಿ 2 ಕಪ್

ತೆಂಗಿನಕಾಯಿ ತುರಿ- 1ಕಪ್

ಉಪ್ಪು

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 3 ಗಂಟೆಗಳ ಕಾಲ ನೆನಸಬೇಕು.

ನಂತರ ನೀರು ಬಸಿದು ಅಕ್ಕಿ ಮತ್ತು ತುರಿದ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.

ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿಗೆ ನೀರು ಬೆರಿಸಿ ತೆಳುವಾಗಿ ಕಲೆಸಿಕೊಳ್ಳಿ

ನಂತರ ಸ್ಟವ್ ಹಚ್ಚಿ ಕಬ್ಬಿಣದ ಹೆಂಚು ಇಟ್ಟು ಚೆನ್ನಾಗಿ ಕಾಯಿಸಿ. ಅದಕ್ಕೆ ಎಣ್ಣೆ ಹಚ್ಚಿ ಸಿದ್ದವಾಗಿಟ್ಟುಕೊಂಡ ನೀರ್ ದೋಸೆ ಹಿಟ್ಟನ್ನು ನಿಮಗೆ ಬೇಕಾದ ಆಕಾರದಲ್ಲಿ ಹಾಕಿ. ನೀರ್ ದೋಸೆಯನ್ನು ಎರಡು ಕಡೆ ಬೇಯಿಸಬಾರದು.

ನಂತರ ತೆಂಗಿನ ಕಾಯಿ ಚಟ್ನಿ ಜೊತೆ ಬಿಸಿಯಾಗಿರುವಾಗಲೇ ನೀರ್ ದೋಸೆ ಸವಿಯಿರಿ.

Write A Comment