ಕರ್ನಾಟಕ

ಮದುವೆ ನೆಪದಲ್ಲಿ ಬಾಲೆಯರ ಕಳ್ಳಸಾಗಣೆ!

Pinterest LinkedIn Tumblr

maduve-ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಮದá-ವೆ ಮೂಲಕ ಮಾನವ ಕಳ್ಳಸಾಗಣೆ ನಡೆಯá-ತ್ತಿದೆಯೇ? ಹೀಗೊಂದು ಅನá-ಮಾನ ಕಲಬá-ರಗಿ ಭಾಗದ ಜನರನ್ನು ಕಾಡá-ತ್ತಿದೆ.

ಅಪ್ರಾಪ್ತ ಬಾಲಕಿಯರನ್ನು ಮದುವೆ ಮಾಡಿಕೊಂಡು ರಾಜಸ್ಥಾನಕ್ಕೆ ತೆರಳಲು ಸಜ್ಜಾಗಿದ್ದ ರಾಜಸ್ಥಾನ ಮೂಲದ ವರ ಸೋದರರಿಬ್ಬರು ಇದೀಗ ಪೊಲೀಸರ ಅತಿಥಿಯಾಗಿರುವುದು ಇಂತಹ ಸಂಶಯಕ್ಕೆ ಪೂರಕವಾಗಿದೆ. 12 ವರ್ಷದ ಬಾಲಕಿ ಜತೆ ವಿಜಯಸಿಂಗ್ ಚೌಧರಿ (40) ಎಂಬಾತ ಜೂ.10ರಂದು ರಹಸ್ಯವಾಗಿ ಮದುವೆಯಾಗಿದ್ದಾನೆ. ಅದೇ ತೆರನಾಗಿ 16 ವರ್ಷದ ಬಾಲಕಿ ಜತೆ ಸುನಿಲ್(42) ಎಂಬಾತ ಗುರುವಾರ ಮದುವೆಯಾಗಿ ಇನ್ನೇನು ಪುಟ್ಟ ಹೆಂಡತಿಯರೊಂದಿಗೆ ರಾಜಸ್ಥಾನಕ್ಕೆ ತೆರಳಬೇಕು ಎನ್ನುವಷ್ಟರಲ್ಲಿ ಈ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಸಂಜೀವನಗರ ಬಡಾವಣೆ ನಿವಾಸಿಯಾಗಿರುವ 12 ವರ್ಷದ ಬಾಲಕಿಗೆ ತಂದೆಯಿಲ್ಲ. ತಾಯಿ ಸೊಲ್ಲಾಪುರಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಯಾದರೆ 50 ಸಾವಿರ ರೂ. ಕೊಡುತ್ತಾರೆ ಎಂಬ ಕಾರಣದಿಂದ ರಾಜಸ್ಥಾನದ ವರ ಮಹಾಶಯನೊಂದಿಗೆ ಕಪನೂರಿನಲ್ಲಿ ಮದುವೆ ಮಾಡಲಾಗಿದೆ.

ಮಕ್ಕಳ ಸಹಾಯವಾಣಿ 1098ಗೆ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಡಾನ್​ಬಾಸ್ಕೋ ತಂಡದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಗ್ಗೆ ಈ ಇಬ್ಬರು ವರ ಮಹಾಶಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆತ್ತವರು ತಲಾ 50 ಸಾವಿರ ರೂ. ಪಡೆದು ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡಿಕೊಡಲು ಮುಂದಾಗಿರುವುದು ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

***

ಗೃಹಬಂಧನ

ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದ ನಿವಾಸಿಯಾಗಿರುವ 16 ವರ್ಷದ ಬಾಲಕಿಯ ತಂದೆ-ತಾಯಿ ಬೆಂಗಳೂರಿನ ಇಟ್ಟಿಗೆ ಗಾರೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಹೆತ್ತವರೇ ಮುಂದೆ ನಿಂತು ಮದುವೆ ಮಾಡುವ ಸಿದ್ಧತೆಯಲ್ಲಿದ್ದರು. ಆದರೆ ಮದುವೆಗೆ ಒಪ್ಪದಿದ್ದಾಗ ಬಾಲಕಿಯನ್ನು ಶ್ರೀನಿವಾಸ ಸರಡಗಿಯಲ್ಲಿ ಗೃಹಬಂಧನದಲ್ಲಿ ಇಡಲಾಗಿತ್ತು.

* ನೈತಿಕ ಭದ್ರ ಬುನಾದಿ ಹಾಗೂ ಕಾನೂನು ಪ್ರಕಾರ ಅಂತಾರಾಜ್ಯ ಮದುವೆ ಆಗುವುದರಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಪಾಲಕರಿಗೆ ಹಣದ ಆಸೆಯೊಡ್ಡಿ ಮಕ್ಕಳನ್ನು ಮಾರಾಟ ಮಾಡುವ ಏಜೆಂಟರನ್ನು ಪೊಲೀಸರು ಬಂಧಿಸಬೇಕು. ಸಚಿವೆ ಉಮಾಶ್ರೀ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಜನಪ್ರತಿನಿಧಿಗಳು ಸಹ ನಿಗಾ ವಹಿಸಬೇಕು.

| ಕೆ.ನೀಲಾ ರಾಜ್ಯಾಧ್ಯಕ್ಷೆ

ಜನವಾದಿ ಮಹಿಳಾ ಸಂಘಟನೆ

Write A Comment