ಮನೋರಂಜನೆ

ಭುಜಂಗ ಸಿನಿಮಾದ ಸೆಷ್ಪಲ್ ನಂಬರ್ ಸಾಂಗ್ ಶೂಟಿಂಗ್

Pinterest LinkedIn Tumblr

bujangaಪ್ರಜ್ವಲ್ ದೇವರಾಜ್ ಸ್ಪೆಷಲ್ ಅವತಾರದಲ್ಲಿ ಕಾಣಿಸಿಕೊಂಡಿರುವ ಭುಜಂಗ ಸಿನಿಮಾದ ಐಟಂ ಸಾಂಗ್ ಶಿಂಗ್ ಇತ್ತೀಚೆಗೆ ನಡೆಯಿತು. ಈ ಸಿನಿಮಾದಲ್ಲಿ ಕಿಲಾಡಿ ಕಳ್ಳನ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಹಾಡಿನ ಶೂಟಿಂಗ್ ಅನ್ನು ಕೂಡ ಕಳ್ಳರ ಅಡ್ಡಾದ ಸೆಟ್ ನಿರ್ಮಿಸಿ ಅದರಲ್ಲಿ ಶೂಟ್ ಮಾಡಲಾಯ್ತು.
ಅಂದ್ಹಾಗೆ ಈ ಐಟಂ ಸಾಂಗ್ ಗೆ ಹೆಜ್ಜೆ ಹಾಕಿರೋದು ಸಪ್ನೋಂಕಿ ರಾಣಿ ಸಿನಿಮಾದ ನಾಯಕಿ ಐಶ್ವರ್ಯಾ. ಅಚಾನಕ್ಕಾಗಿ ಕಳ್ಳರ ಅಡ್ಡಾಕ್ಕೆ ಬರೋ ಹುಡುಗಿಯಾಗಿ ಐಶ್ವರ್ಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹಾಡಿನ ಶೂಟಿಂಗ್ ಗಾಗಿ ಅತ್ಯಂತ ಕಲರ್ ಫುಲ್ ಆಗಿ ಸೆಟ್ ನಿರ್ಮಿಸಲಾಗಿತ್ತು. ರಾಮ್ ಮಾಸ್ಟರ್ ಸಾಂಗ್ ಗೆ ಕೊರಿಯಾಗ್ರಫಿ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಪ್ರಜ್ಲವ್ ಗೆ ನಾಯಕಿಯಾಗಿ ರಾಜಾಹುಲಿ ಸಿನಿಮಾ ಖ್ಯಾತಿಯ ಮೇಘನಾ ರಾಜ್ ಕಾಣಿಸಿಕೊಂಡಿದ್ದು, ಕಳ್ಳನೊಬ್ಬ ಪ್ರೀತಿಯಲ್ಲಿ ಬಿದ್ದು ಹೇಗೆ ಬದಲಾಗುತ್ತಾನೆ ಅನ್ನೋದೇ ಸಿನಿಮಾದ ಸ್ಟೋರಿಯಂತೆ. ಈ ಸಿನಿಮಾವನ್ನು ಜೀವಾ ನಿರ್ದೇಶಿಸಿದ್ದು, ಬಿ.ಎ. ಮಧು ಸಿನಿಮಾಗೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

Write A Comment