ಕ್ರೇಜಿಸ್ಟಾರ್ ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸೋದನ್ನು ನಾವು ನೋಡಿದ್ದೇವೆ. ಆದ್ರೆ ರವಿಮಾಮ ಅಭಿಮಾನಿಗಳಿಗೆ ಅವರನ್ನು ಮತ್ತೊಂದು ಹೊಸ ಅವತಾರದಲ್ಲಿ ನೋಡೋ ಅವಕಾಸ ಸಿಕ್ಕಿದೆ. ಇದೇ ಮೊದಲ ಬಾರಿಗೆ ರವಿ ಸಾರ್ ಜಾಹೀರಾತೊಂದರಲ್ಲಿ ಅಭಿನಯಿಸಿದ್ದಾರೆ.
ಡೆಂಗ್ಯೂ ಜ್ವರದ ಕುರಿತಾಗಿ ಜಾಗೃತಿ ಮೂಡಿಸುವ ಜಾಹೀರಾತಿನಲ್ಲಿ ರವಿಚಂದ್ರನ್ ನಟಿಸಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಜಾಹೀರಾತಿನಲ್ಲಿ ನಟಿಸಲು ರವಿಚಂದ್ರನ್ ಒಂದೇ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲವಂತೆ. ಉಚಿತವಾಗಿ ಅವರು ಜಾಹೀರಾತಿನಲ್ಲಿ ನಟಿಸಿದ್ದಾರಂತೆ.
ಇನ್ನು ರವಿಚಂದ್ರನ್ ಜಾಹೀರಾತುವಿನಲ್ಲಿ ಕಾಣಿಸಿಕೊಳ್ಳುತ್ತಿರೋದು ಇದೇ ಮೊದಲು. ಈ ಹಿಂದೆ ಶಿವರಾಜ್ ಕುಮಾರ್ ಸುದೀಪ್ ರಮ್ಯಾ, ದಿಗಂತ್ ಐಂದ್ರಿತಾ ಪುನೀತ್ ರಾಜ್ ಕುಮಾರ್ ಪ್ರಿಯಾಂಕ, ಉಪೇಂದ್ರ ಮುಂತಾದ ಕನ್ನಡ ನರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ರು. ಇದೀಗ ಅವರ ಸಾಲಿಗೆ ರವಿಮಾಮ ಕೂಡ ಸೇರಿದ್ದಾರೆ.