ಮನೋರಂಜನೆ

ಕಪಿಲ್ ಶರ್ಮಾರನ್ನು ಹೊಗಳಿದ ರಿಷಿ ಕಪೂರ್

Pinterest LinkedIn Tumblr

kapilಇತ್ತೀಚೆಗೆ ಹಿರಿಯ ನಟ ರಿಷಿ ಕಪೂರ್ ತಮ್ಮ ಸಿನಿಮಾ ಆಲ್ ಈಸ್ ವೆಲ್ ಚಿತ್ರದ ಪ್ರಮೋಷನ್ ಗಾಗಿ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಶೋದಲ್ಲಿ ಕಪಿಲ್ ಜೊತೆ ಭಾಗವಹಿಸಿದ್ದು ರಿಷಿ ಸಾಹೇಬ್ರಿಗೆ ತುಂಬಾನೇ ಖುಷಿಯಾಗಿದೆಯಂತೆ.

ಕಾಮಿಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಹೇಳಿಕೊಂಡಿರುವ ಕಪಿಲ್ ಇದೊಂದು ಅದ್ಭುತವಾದ ಕಾರ್ಯಕ್ರಮ ಎಂದಿದ್ದಾರೆ. ಅಲ್ಲದೇ ಕಪಿಲ್ ನಿಂದಾಗಿಯೇ ಪ್ರಮೋಷನ್ ಕಾರ್ಯಕ್ರಮ ಅತ್ಯಂತ  ಸುಂದರವಾಗಿ ಮೂಡಿ ಬಂತು ಆತನಿಗೆ ಧನ್ಯವಾದ ಎಂದಿದ್ದಾರೆ. ಇನ್ನು ರಿಷಿ ಟ್ವೀಟ್ ಪ್ರತಿಕ್ರಿಯಿಸಿರುವ ಕಪಿಲ್ ನಿಮ್ಮ ಹೊಗಳಿಕೆ ನನಗೆ ಖುಷಿ ನೀಡಿದೆ. ನೀವು ನಿಜವಾದ ಎಂಟರ್ರಟ್ರೈನರ್ ಎಂದಿದ್ದಾರೆ.

ಆಲ್ ಈಸ್ ವೆಲ್ ಸಿನಿಮಾದಲ್ಲಿ ರಿಷಿ ಕಪೂರ್ ಅಭಿಷೇಕ್ ಬಚ್ಚನ್ ತಂದೆಯಾಗಿ ಕಾಣಿಸಿಕೊಂಡಿದ್ದು, ಸುಪ್ರೀಯಾ ಪಾಠಕ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಜಾಕ್ವೆಲಿನ್ ಫೆರ್ನಾಂಡೀಸ್ ಅಭಿಗೆ ಜೋಡಿಯಾಗಿದ್ದಾರೆ. ಈ ಸಿನಿಮಾವನ್ನು ಉಮೇಶ್ ಶುಕ್ಲಾ ನಿರ್ದೇಶಿಸಿದ್ದು ಆಗಸ್ಟ್ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

Write A Comment