ಮನೋರಂಜನೆ

‘ಬಾಹುಬಲಿ’ ಎಫೆಕ್ಟ್: ರಜನಿ ಚಿತ್ರ ನಿರ್ದೇಶಿಸುತ್ತಿದ್ದಾರೆ ವಿಜಯೇಂದ್ರ ಪ್ರಸಾದ್

Pinterest LinkedIn Tumblr

raaaaಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದು, ಈ ಚಿತ್ರದ ಯಶಸ್ಸಿನ ಹಿಂದಿದ್ದ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರ ನಿರ್ದೇಶಿಸಲಿದ್ದಾರೆಂದು ಹೇಳಲಾಗುತ್ತಿದೆ.

‘ಬಾಹುಬಲಿ’ ಯಶಸ್ಸಿನ ಬಳಿಕ ರಾಜಮೌಳಿಯವರಿಗೆ ಬಾಲಿವುಡ್ ನಿಂದ ಯಥೇಚ್ಚ ಆಫರ್ ಗಳು ಬರುತ್ತಿದ್ದು, ವಿಜಯೇಂದ್ರ ಪ್ರಸಾದ್ ಮಾತ್ರ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಮುಂದುವರಿಯಲು ಬಯಸಿದ್ದಾರೆನ್ನಲಾಗಿದೆ. ಇತ್ತೀಚೆಗೆ ನಡೆದ ಚಿತ್ರರಂಗದ ಸಮಾರಂಭವೊಂದರಲ್ಲಿ ರಜನಿಕಾಂತ್ ಹಾಗೂ ವಿಜಯೇಂದ್ರ ಪ್ರಸಾದ್ ಪರಸ್ಪರ ಭೇಟಿಯಾಗಿದ್ದು, ಈ ವೇಳೆ ರಜನಿಕಾಂತ್ ‘ಬಾಹುಬಲಿ’ ಯಶಸ್ಸಿಗಾಗಿ ವಿಜಯೇಂದ್ರ ಪ್ರಸಾದ್ ಅವರನ್ನು ಅಭಿನಂದಿಸಿರುವುದಲ್ಲದೇ ಶಾಲು ಹೊದಿಸಿ ಸತ್ಕರಿಸಿದ್ದಾರೆ.

ಈ ಸಂದರ್ಭದಲ್ಲಿ ರಜನಿಕಾಂತ್ ಅವರ ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ತಮ್ಮ ಹಂಬಲವನ್ನು ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿದ್ದು, ಇದಕ್ಕೆ ಕೂಡಲೇ ರಜನಿಕಾಂತ್ ಒಪ್ಪಿಗೆ ಸೂಚಿಸಿದ್ದಾರೆನ್ನಲಾಗಿದೆ. ಚಿತ್ರ ಕಥೆಯ ಎಳೆಯನ್ನು ವಿಜಯೇಂದ್ರ ಪ್ರಸಾದ್, ರಜನಿಕಾಂತ್ ಅವರ ಬಳಿ ಹೇಳಿದ ವೇಳೆ ಅವರು ಥ್ರಿಲ್ ಆಗಿದ್ದಾರೆನ್ನಲಾಗಿದೆ. ಸದ್ಯ ‘ರೋಬೋ 2’ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಜನಿಕಾಂತ್ ಅದಾದ ಬಳಿಕ ವಿಜಯೇಂದ್ರ ಪ್ರಸಾದ್ ಅವರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲಿದ್ದಾರೆನ್ನಲಾಗಿದೆ.

Write A Comment