15 ವರ್ಷದ ಬಾಲಕಿಯನ್ನು ಆರು ಮಂದಿ ಕಾಮುಕರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆ ಮುಂಬೈನಲ್ಲಿ ನಡೆದಿದೆ.
ಚೆಂಬೂರು ಉಪನಗರದ ಹೌಸಿಂಗ್ ಸೊಸೈಟಿಯೊಂದಕ್ಕೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಗಮನಿಸಿದ ಆಕೆಯ ಪರಿಚಯದವನೇ ಆದ ಕಾಮುಕನೊಬ್ಬ ತನ್ನ ಇತರ ಸ್ನೇಹಿತರಿಗೆ ತಿಳಿಸಿದ್ದು ಆಕೆಯನ್ನು ಎಳೆದೊಯ್ದ ಕಾಮುಕರು ಒಬ್ಬರಾದ ಮೇಲೊಬ್ಬರಂತೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಚೆಂಬೂರಿನ ಪೆಸ್ಟೋಮ್ ಸಾಗರ್ ಪ್ರದೇಶದಲ್ಲಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡ ತಿಲಕ್ ನಗರ ಪೊಲೀಸ್ ಠಾಣೆಯ ಪೊಲೀಸರು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ತಲೆ ಮರೆಸಿಕೊಂಡಿರುವ ಹೌಸಿಂಗ್ ಸೊಸೈಟಿಯ ಮುಖ್ಯಸ್ಥನ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.