ಮನೋರಂಜನೆ

ಪ್ರಧಾನಿ ಮೋದಿ ಸರ್ಕಾರವನ್ನು ಮತ್ತೆ ಟೀಕಿಸಿದ ಬಾಲಿವುಡ್ ನಟಿ

Pinterest LinkedIn Tumblr

srutiಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ‘ಸೆಲ್ಫಿ ವಿತ್ ಡಾಟರ್’ ಹೇಳಿಕೆಯನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಟೀಕಿಸುವ ಮೂಲಕ ಮೋದಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಶೃತಿ ಸೇತ್ ಈಗ ಮತ್ತೊಮ್ಮೆ ಸರ್ಕಾರವನ್ನು ಟೀಕಿಸಿದ್ದಾರೆ.

‘ವಿಶ್ವ ಯೋಗ ದಿನಾಚರಣೆ’ ಯ ಎಸ್ಎಂಎಸ್ ಗಾಗಿ 15 ಕೋಟಿ ರೂ. ವೆಚ್ಚ ಮಾಡಿರುವುದನ್ನು ತಮ್ಮ ಟ್ವೀಟ್ ನಲ್ಲಿ ಪ್ರಶ್ನಿಸಿರುವ ಶೃತಿ ಸೇತ್, ಸರ್ಕಾರದ ಅದ್ಯತೆಗಳು ಇವುಗಳೇ ಏನು ಎಂದು ಕೇಳಿದ್ದಾರಲ್ಲದೇ ಇದನ್ನು ಈಗ ಹೇಗೆ ಸಮರ್ಥಿಸಿಕೊಳ್ಳುತ್ತಾರೆಂದು ಪ್ರಶ್ನಿಸಿದ್ದಾರೆ.

ಕಿರು ತೆರೆ ಹಾಗೂ ಹಿರಿ ತೆರೆ ನಟಿಯಾಗಿರುವ ಶೃತಿ ಸೇಥ್ ಈ ಹಿಂದೆ ಮಾಡಿದ್ದ ‘ಸೆಲ್ಫಿ ವಿತ್ ಡಾಟರ್’ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಬಹಳಷ್ಟು ಮಂದಿ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದರು. ಇದಾದ ಬಳಿಕ ತಮ್ಮ ಟ್ವೀಟ್ ಹಿಂದೆ ಪಡೆದಿದ್ದ ಶೃತಿ ಸೇಥ್, ತಮ್ಮ ನಿಲುವಿಗೆ ಈಗಲೂ ಬದ್ದ ಎಂಬ ಹೇಳಿಕೆ ನೀಡಿದ್ದರು. ತಮಗೆ ಬೆದರಿಕೆಗಳು ಬಂದಿದ್ದರೂ ಪೊಲೀಸ್ ರಕ್ಷಣೆ ಕೋರುವುದಿಲ್ಲವೆಂದಿದ್ದ ಅವರು, ನನ್ನನ್ನು ನಾನು ರಕ್ಷಿಸಿಕೊಳ್ಳಲು ಗೊತ್ತಿದೆ ಎಂದು ತಿರುಗೇಟು ನೀಡಿದ್ದರು.

Write A Comment