ಭಾರೀ ನಿರೀಕ್ಷೆ ಮೂಡಿಸಿರುವ ನಟ ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಸಿನಿಮಾದ ಚಿತ್ರೀಕರಣ ವಿಶಾಖಪಟ್ಟಣದಲ್ಲಿ ನಡೆಯುತ್ತಿದ್ದು, ಇಲ್ಲಿನ ಸಮುದ್ರ ತೀರದಲ್ಲಿ ನಡೆಯುತ್ತಿರುವ ಚಿತ್ರೀಕರಣದ ವೇಳೆ ನಟಿ ಪಾರುಲ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾಳೆ.
ರಾಮ್‍ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು ಚಿತ್ರೀಕರಣದ ಸಮಯದಲ್ಲಿ ಸಾಹಸ ದೃಶ್ಯವೊಂದು ನಡೆಯುತ್ತಿತ್ತು. ಈ ಸಮಯದಲ್ಲಿ ನಟಿ ಪಾರುಲ್ ಬಲಗಾಲಿನ ಉಗುರು ಕಿತ್ತು ಬಂದಿದ್ದು ತಕ್ಷಣ ಪಾರುಲ್ ಆಸ್ಪತ್ರೆಗೆ ಹೋಗಿ ಟ್ರೀಟ್‍ಮೆಂಟ್ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಘಟನೆ ಸಂಬಂಧ ಅವರೇ ಗಾಯದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ನೋಡಿದ ಪಾರುಲ್ ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಹಾರೈಸಿದ್ದು ಇದರ ಜತೆಗೇ ನಟಿ ಪ್ರಿಯಾಂಕ ಉಪೇಂದ್ರ ಕೂಡ ಪಾರುಲ್ ಶೀಘ್ರ ಗುಣಮುಖರಾಗುವಂತಾಗಲಿ ಎಂದು ಟ್ವೀಟ್ ಮಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.