ಐಪಿಎಲ್ ಫಿಕ್ಸಿಂಗ್ ಕಳಂಕದಿಂದ ಹೊರ ಬಂದು ಮತ್ತೆ ಭಾರತ ಕ್ರಿಕೆಟ್ ತಂದ ಸೇರುವ ಪ್ರಯತ್ನದಲ್ಲಿರುವ ಕ್ರಿಕೆಟಿಗ ಎಸ್ ಶ್ರೀಶಾಂತ್ ರಾಷ್ಟ್ರೀಯ ಸ್ವಂಯ ಸೇವಕ ಸಂಘದ ಸ್ವಯಂ ಸೇವಕರಾಗಿ ಕೆಲಸ ಮಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಮಂಗಳವಾರ ಕೊಚ್ಚಿಯಲ್ಲಿ ಸೇವಾ ಭಾರತಿ ನೀಡುವ ಉಚಿತ ಆಹಾರವನ್ನು ಜನರಿಗೆ ವಿತರಣೆ ಮಾಡಿರುವ ಶ್ರೀಶಾಂತ್ ಆ ಮೂಲಕ ತಮ್ಮ ಸಮಾಜ ಸೇವೆಯ ಸ್ವರೂಪವನ್ನು ತೆರೆದಿಟ್ಟಿದ್ದಾರೆ. ಆರ್‍ಎಸ್‍ಎಸ್‍ಗೆ ಸ್ವಯಂ ಸೇವಕರಾಗಿ ಸೇರ್ಪಡೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಲವರು ಶ್ರೀಶಾಂತ್ ಅವರ ಕ್ರಮಕ್ಕೆ ಭೇಷ್ ಎಂದರೆ ಕೆಲವರು ಕಟಕಿಯಾಡಿದ್ದಾರೆ.
ಕೆಲದಿನಗಳ ಹಿಂದೆಯಷ್ಟೇ ಪಟಿಯಾಲ ಕೋರ್ಟ್ ಐಪಿಎಲ್ ಫಿಕ್ಸಿಂಗ್ ಪ್ರಕರಣದಿಂದ ಶ್ರೀಶಾಂತ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ತಮಗೆ ವಿಧಿಸಲಾಗಿದ್ದ ಆಜೀವ ನಿಷೇಧವನ್ನು ತೆರವುಗೊಳಿಸುವಂತೆ ಶ್ರೀಶಾಂತ್ ಬಿಸಿಸಿಐ ನ ಬಾಗಿಲು ತಟ್ಟಿದ್ದನ್ನಿಲ್ಲಿ ಸ್ಮರಿಸಬಹುದು.