ಬೆಲೆ ಬಾಳುವ ಸ್ಮಾರ್ಟ್ ಫೋನ್ ಕಳೆದುಕೊಂಡು ಪರಿತಪಿಸುತ್ತಿದ್ದೀರಾ? ಅಥವಾ ಅದರಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಮಹತ್ವದ ಮಾಹಿತಿ ಬಹಿರಂಗವಾಗುತ್ತದೆಂಬ ಭೀತಿ ಕಾಡುತ್ತಿದೆಯಾ? ಚಿಂತೆ ಬೇಡ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಈಗ ನಿಮ್ಮ ನೆರವಿಗೆ ಬರಲಿದೆ.
ಸ್ಮಾರ್ಟ್ ಫೋನ್ ಕಳೆದುಕೊಂಡ ವೇಳೆ ಅಂಡ್ರಾಯ್ಡ್ ಮಾರ್ಕೆಟ್ ಗೆ ಲಾಗಿನ್ ಆಗಿರುವ ಗೂಗಲ್ ಅಕೌಂಟ್ ಮೂಲಕ ಕಂಪ್ಯೂಟರ್ ನ ಸರ್ಚ್ ಬಾಕ್ಸ್ ನಲ್ಲಿ ‘ಫೈಂಡ್ ಮೈ ಫೋನ್’ ಎಂದು ಟೈಪ್ ಮಾಡಿದರೆ ಆ ಫೋನ್ ಇರುವ ಸ್ಥಳದ ಆಂದಾಜು ಮಾಹಿತಿಯನ್ನು ಗೂಗಲ್ ನೀಡುತ್ತದೆ.
ಒಂದು ವೇಳೆ ಕಾರಿನಲ್ಲೋ ಅಥವಾ ಮನೆಯ ಯಾವುದೋ ಮೂಲೆಯಲ್ಲಿ ಫೋನ್ ಇಟ್ಟು ಮರೆತಿದ್ದರೆ ಇದರ ಮೂಲಕ ರಿಂಗ್ ಕೊಡುವ ಸೌಲಭ್ಯವೂ ಇದ್ದು ಆ ಮೂಲಕ ಫೋನ್ ಪತ್ತೆ ಹಚ್ಚಬಹುದಾಗಿದೆ. ಅಲ್ಲದೇ ಫೋನ್ ಸಿಗದೆ ಇದ್ದ ಪಕ್ಷದಲ್ಲಿ ಅದರಲ್ಲಿರುವ ಮಾಹಿತಿಯನ್ನು ಬೇರೊಬ್ಬರಿಗೆ ಸಿಗದಂತೆ ಗೂಗಲ್ ಅಕೌಂಟ್ ಮೂಲಕ ಅಳಿಸಿ ಹಾಕಬಹುದಾದ ಸೌಲಭ್ಯವೂ ಇದೆ. ಇದಕ್ಕಾಗಿ ಅಪ್ ಡೇಟ್ ಆಗಿರುವ ಆ್ಯಪ್ ಇರಬೇಕಷ್ಟೇ. ಹಾಗೂ ಫೋನಿನಲ್ಲಿ ನೆಟ್ ಸೌಲಭ್ಯವೂ ಇರಬೇಕಾಗುತ್ತದೆ.