ರಸ್ತೆಗಳಲ್ಲಿ ಯುವಕರು ತಮ್ಮ ಬೈಕ್ ಗಳಲ್ಲಿ ಸ್ಟಂಟ್ ಮಾಡುವುದು ಮಾಮೂಲು. ಆದರೆ ಆಸ್ಟ್ರೇಲಿಯಾದ ಸಾಹಸಿಯೊಬ್ಬ ಸಮುದ್ರದ ಮೇಲೆ ಬೈಕ್ ಓಡಿಸಿ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು. ಆಸ್ಟ್ರೇಲಿಯಾದ ಸಾಹಸಿ ರೋಬಿ ಮಡ್ಡೋ ಮ್ಯಾಡಿಸನ್ ಈ ವಿಶೇಷವಾದ ಸಾಹಸ ಮಾಡಿದ್ದು ದೈತ್ಯ ಅಲೆಗಳ ಮೇಲೆ ಬೈಕ್ ಓಡಿಸಿ ಅಚ್ಚರಿಗೆ ಕಾರಣರಾಗಿದ್ದಾರೆ. ಸಾಗರದಲ್ಲಿ ಸವಾರಿ ಮಾಡುವುದಕ್ಕಾಗಿಯೇ ತಮ್ಮ ಕೆಟಿಎಂ 250 ಎಸ್‍ಎಕ್ಸ್‍ಡರ್ಟ್ ಬೈಕ್‍ನನ್ನು ವಿಶೇಷವಾಗಿ ಮಾರ್ಪಾಡು ಮಾಡಿಕೊಂಡಿದ್ದ ಇವರು ಈ ಸಾಹಸಕ್ಕೆ ಮುಂಜಾಗೃತ ಕ್ರಮವಾಗಿ ಮ್ಯಾಡಿಸನ್ ಹೆಲ್ಮೆಟ್ ಕೂಡ ಬಳಕೆ ಮಾಡಿದ್ದರು. ವಿಶೇಷವೆಂದರೆ ಈ ಬೈಕ್‍ನ ಚಕ್ರಗಳು ಸಾಮಾನ್ಯ ಬೈಕ್‍ಗಳ ಚಕ್ರಗಳಿಗಿಂತ ಚಿಕ್ಕದಾಗಿರುವುದರಿಂದ ಬೈಕ್ ಅಲೆಗಳ ಮೇಲೆ ಸರಾಗವಾಗಿ ಚಲಿಸುತ್ತದೆ.
ಏನೇ ಇರಲಿ, 34 ವರ್ಷದ ಮ್ಯಾಡಿಸನ್ ಫ್ರಾನ್ಸ್‍ನ ದ್ವೀಪದಲ್ಲಿರುವ ಟಿಹಾಟಿ ಸಮುದ್ರದ ದೈತ್ಯ ಅಲೆಗಳ ಮೇಲೆ ತಮ್ಮ ಮೋಟಾರ್ ಬೈಕ್‍ನ್ನು ಓಡಿಸಿ ಸಾಹಸ ಪ್ರದರ್ಶಿಸಿದ್ದು ಇದೀಗ ಇವರ ವಿಭಿನ್ನ ಸಾಹಸ ವೀಲಿಂಗ್ ಹುಚ್ಚಿನ ಹುಡುಗರಿಗೆ ಮತ್ತಷ್ಟು ಹುರುಪು ಬರುವುದಂತೂ ಖಚಿತ.