ಮನೋರಂಜನೆ

ಬಾಹುಬಲಿಯ ಆದಾಯ 14 ದಿನಗಳಲ್ಲಿ 401 ಕಲೆಕ್ಷನ್

Pinterest LinkedIn Tumblr

8453Baahubali-5th-Day-Collectionಭಾರತೀಯ ಚಿತ್ರ ರಂಗದಲ್ಲಿ ಭಾರೀ ಸದ್ದು ಮಾಡಿರುವ ‘ಬಾಹುಬಲಿ’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತ  ಸಾಗಿದ್ದು ಬಿಡುಗಡೆಯಾದ ಹದಿನಾಲ್ಕು ದಿನಗಳಲ್ಲಿ ಬೃಹತ್ ಆದಾಯ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ.

ಹೌದು. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಆ ಮೂಲಕ ತನ್ನ ಎಲ್ಲ ಅವತರಣಿಕೆಗಳ ಒಟ್ಟು ಕಲೆಕ್ಷನ್ 401 ಕೋಟಿ ರೂಪಾಯಿಗಳನ್ನು ಕೇವಲ 14 ದಿನಗಳಲ್ಲಿ ಗಳಿಸಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ಬಿಡುಗಡೆಯಾದ ಎರಡೇ ದಿನಕ್ಕೆ ನೂರು ಕೋಟಿ ಗಳಿಸಿ ಬಾಲಿವುಡ್ ಮಂದಿಯಾ ಅಚ್ಚರಿಗೆ ಕಾರಣವಾಗಿದ್ದ ಈ ಚಿತ್ರ, ನಾಲ್ಕು ದಿನಗಳಲ್ಲಿಯೇ 200 ಕೋಟಿ ಗಳಿಸಿತ್ತು. ತದ ನಂತರ ಸಲ್ಮಾನ್ ಖಾನ್ ಅವರ ಭಜರಂಗಿ ಭಾಯ್ ಜಾನ್ ಸೇರಿದಂತೆ ಹಲವು ಚಿತ್ರಗಳು ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡಿದ್ದು ಸ್ವಲ್ಪ ಹಿನ್ನಡೆ ಕಂಡಿತು. ಆದರೂ ಸಹ  ಹದಿನಾಲ್ಕು ದಿನ ಪೂರೈಸುವುದರ ಒಳಗಾಗಿ 401 ಕೋಟಿ ಆದಾಯ ಗಳಿಸಿ ಹೊಸ ದಾಖಲೆ ಬರೆದಿದ್ದಂತೂ ಸತ್ಯ.

Write A Comment