ಮನೋರಂಜನೆ

ಮೈದಾನದಲ್ಲಿಯೇ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ ಆಟಗಾರ !

Pinterest LinkedIn Tumblr

513325shawn2ಆಕೆ ಅಮೆರಿಕಾದ ಖ್ಯಾತ ಜಿಮ್ನಾಶಿಯಂ ಪಟು. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆಯೂ ಆಕೆಗಿದೆ. ಶುಕ್ರವಾರದಂದು ಮೈದಾನದಲ್ಲಿಯೇ ಎಲ್ಲರೆದುರೇ ಫುಟ್ಬಾಲ್ ಆಟಗಾರನೊಬ್ಬ ಆಕೆಯ ಮುಂದೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡರೆ ಹೇಗಾಗಿರಬೇಡ.

ಹೌದು ! ಅಮೆರಿಕಾದ ಚಿಕಾಗೋದಲ್ಲಿನ ರಿಗ್ಲೇ ಫೀಲ್ಡ್ ಇಂತದೊಂದು ನಾಟಕೀಯ ವಿದ್ಯಾಮಾನಕ್ಕೆ ಸಾಕ್ಷಿಯಾಯಿತು. ಜಿಮ್ನಾಶಿಯಂ ಪಟು ಶಾನ್ ಜಾನ್ಸನ್ ಅವರ ಮುಂದೆ ಮಂಡಿಯೂರಿದ ಅಂಡ್ರ್ಯೂ ಈಸ್ಟ್ ಎಲ್ಲರ ಮುಂದೆಯೇ ಪ್ರೇಮ ನಿವೇದನೆ ಮಾಡಿದನಲ್ಲದೇ ವಿವಾಹವಾಗುವ ಪ್ರಸ್ತಾವನ್ನೂ ಇಟ್ಟರು.

ಶಾನ್ ಜಾನ್ಸನ್ ಇದರಿಂದ ಒಂದು ಕ್ಷಣ ಕಕ್ಕಾಬಿಕ್ಕಿಯಾದರೂ ಬಳಿಕ ಎಸ್ ಎಂದಿದ್ದಾರೆ. ಈ ಜೋಡಿ ಒಂದಾಗುತ್ತಿರುವುದಕ್ಕೆ ಅಲ್ಲಿದ್ದ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಶಾನ್ ಜಾನ್ಸನ್ ಹಾಗೂ ಅಂಡ್ರ್ಯೂ ಈಸ್ಟ್ ತಮ್ಮ ಸಾಮಾಜಿಕ ಜಾಲ ತಾಣದ ಪುಟದಲ್ಲಿ ಈ ಖುಷಿ ವಿಚಾರವನ್ನು ಚಿತ್ರ ಸಮೇತ ಹಂಚಿಕೊಂಡಿದ್ದಾರೆ.

Write A Comment