ಮುಂಬೈ

ಅರೆ ಬೆತ್ತಲೆಯಾಗಿ ಕುಣಿಯುತ್ತಿದ್ದ ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು

Pinterest LinkedIn Tumblr

betaleಮುಂಬೈ: ವಿಕೇಂಡ್ ಪಾರ್ಟಿಯಲ್ಲಿ ಅಶ್ಲೀಲ ಉಡುಪು ಧರಿಸಿ ಕುಣಿಯುತ್ತಿದ್ದ 10 ಮಂದಿ ಯುವತಿಯರೂ ಸೇರಿದಂತೆ 25 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರ ಮೇಲೆ ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಮುಂಬೈನ ವಡಲಾ ಪ್ರದೇಶದಲ್ಲಿರುವ ಮಿನಿ ಮಹಲ್ ಬಾರ್ ಮೇಲೆ ದಾಳಿ ನಡೆಸಿದ ಪೊಲೀಸರು ಮಾಲೀಕ ಸುರೇಂದ್ರ ಸಿಂಗ್ ಸೇರಿದಂತೆ 25 ಮಂದಿಯನ್ನು ವಶಕ್ಕೆ ಪಡೆದಿದ್ದು, ಯುವತಿಯರಿಗೆ ಬೆಳಿಗ್ಗೆ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಬಾರ್ ಮಾಲೀಕ ಹುಡುಗಿಯರಿಗೆ ಅಶ್ಲೀಲ ಉಡುಪು ಧರಿಸುವಂತೆ ತಾಕೀತು ಮಾಡಿ ಹಾಡಿಗೆ ನೃತ್ಯ ಮಾಡಿಸುತ್ತಿದ್ದನೆಂದು ಹೇಳಲಾಗಿದೆ.

ಅಲ್ಲದೇ ಪೊಲೀಸರು ದಾಳಿ ಮಾಡುವುದನ್ನು ಮುಂಚಿತವಾಗಿ ತಿಳಿಯುವ ಸಲುವಾಗಿ ರಸ್ತೆಯುದ್ದಕ್ಕೂ ಸಿಸಿ ಟಿವಿ ಕ್ಯಾಮರಾಗಳನ್ನು ಹಾಕಿಸಿರುವುದು ಕಂಡು ಬಂದಿದೆ. ತಮಗೆ ದೊರೆತ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಪೊಲೀಸರು 10 ಮಂದಿ ಯುವತಿಯರು, ಬಾರ್ ಮಾಲೀಕ ಹಾಗೂ ಗ್ರಾಹಕರನ್ನು ವಶಕ್ಕೆ ಪಡೆದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Write A Comment