ಮನೋರಂಜನೆ

ಮೈತ್ರಿಯಾ ಗೌಡ ಬಿಚ್ಚಿಟ್ಟ ‘ಪ್ರೇಮ’ ರಹಸ್ಯ !

Pinterest LinkedIn Tumblr

5482kartik-gowdaಕೇಂದ್ರ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ಜತೆ ತಾನು ಮದುವೆಯಾಗಿದ್ದೇನೆ ಎಂದು ವಿವಾದದ ಅಲೆ ಎಬ್ಬಿಸಿದ್ದ ನಟಿ ಮೈತ್ರಿಯಾ ಗೌಡ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ತಾವು  ಕಾರ್ತಿಕ್ ಗೌಡರನ್ನು ಮತ್ತೆ ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದೇನೆ. ಅವರಿಗೂ ನನ್ನೊಂದಿಗೆ ಬಾಳಲು ಆಸೆ ಇದ್ದು ಆದರೆ ಕಾರ್ತಿಕ್ ಅಮ್ಮ ಇದಕ್ಕೆ ಅಡ್ಡಗಾಲಾಗಿದ್ದಾಳೆ ಎಂದು ಕಿಡಿಕಾರಿದ್ದಾಳೆ. ಅಲ್ಲದೇ ನನ್ನ ಹಾಗೂ ಕಾರ್ತಿಕ್ ಸಂಬಂಧದ ಬಗ್ಗೆ ಸಾಕ್ಷಿಗಳು ಇನ್ನೂ ಮುಕ್ತ ಮನಸ್ಸಿನಿಂದ ಸಾಕ್ಷಿ  ಹೇಳಲು ಮುಂದಾಗುತ್ತಿಲ್ಲ ಎಂದ ಮೈತ್ರಿಯಾ ಇದರಿಂದ ಸ್ವಲ್ಪ ತೊದರೆಯಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೇ ತಾವು ಕಾರ್ತಿಕ್  ಅವರನ್ನು ಭೇಟಿ ಮಾಡಿ 10 ನಿಮಿಷ ಖಾಸಗಿಯಾಗಿ ನಾವಿಬ್ಬರೇ ಮಾತನಾಡಿದ್ದು ಈ ಸಮಯದಲ್ಲಿ ತಾವಿಬ್ಬರು ಒಟ್ಟಿಗೆ ಕಳೆದ ದಿನಗಳನ್ನು ಸ್ಮರಿಸಿಕೊಂಡರು ಎನ್ನುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಅಲ್ಲದೇ ಕಾರ್ತೀಕ್ ಗೆ ಈಗಲೂ ನನ್ನ ಮೇಲೆ ಅದೇ ಪ್ರೀತಿ ಇದೆ. ಒಂದು ಹಂತದಲ್ಲಿ ಅವರ ತಂದೆ ಸದಾನಂದ ಗೌಡ ಕೂಡಾ ನಮ್ಮ ಮದುವೆ ಮಾಡೋಣ ಅಂತ ಹೇಳಿದ್ದಾರೆ. ಆದರೆ, ಅವರ ಅಮ್ಮ ಅದಕ್ಕೆ ಒಪ್ಪುತ್ತಿಲ್ಲ. ಕಾರ್ತಿಕ್‌ಗೆ ನಮ್ಮ ಪ್ರೇಮವನ್ನು ಪಬ್ಲಿಕ್ ಮಾಡಿದ್ದರ ಬಗ್ಗೆ ಸ್ವಲ್ಪ ಬೇಸರ ಇದೆ. ಪರಿಸ್ಥಿತಿಗೆ ನಾನು ರಿಯಾಕ್ಟ್ ಮಾಡಿದೆ ಎಂದು ತಿಳಿಸಿದ್ದೇನೆ ಎಂದು ವಿವರಿಸಿದ್ದಾರೆ.

Write A Comment