ರಾಷ್ಟ್ರೀಯ

ಪ್ರೇಮಿಗಳಿಗೆ ಶಾಕ್ ನೀಡುತ್ತೆ ಈ ಬೋರ್ಡ್

Pinterest LinkedIn Tumblr

9788no-kissingಸಿಗರೇಟು ಸೇದುವುದನ್ನು ಇಲ್ಲಿ ನಿಷೇಧಿಸಲಾಗಿದೆ. ಇಲ್ಲಿ ಮೂತ್ರ ಮಾಡಬೇಡಿ. ಇಂತ ಬೋರ್ಡ್ ಗಳನ್ನು ನೀವು ನೋಡಿರುತ್ತೀರಾ. ಮುಂಬೈ ಮಾಲ್ ಒಂದರಲ್ಲಿ ನೇತು ಹಾಕಿರುವ ಬೋರ್ಡ್ ನಿಮಗೆ ಆಶ್ಚರ್ಯ ಹುಟ್ಟಿಸುತ್ತೆ.

ಇತ್ತೀಚೆಗೆ ಭಾರತ ಫಾರಿನ್ ಆಗ್ತಾ ಇದೆ. ಕಂಡ ಕಂಡಲ್ಲಿ ಪ್ರೇಮಿಗಳ ಪ್ರೀತಿ ಆಟ ಜಾಸ್ತಿಯಾಗಿದೆ. ಇದರಿಂದ ಮುಂಬೈನ ಜವಾಹರಲಾಲ್ ನೆಹರು ರಸ್ತೆಯಲ್ಲಿರುವ ನೆಪ್ಚೂನ್ ಮ್ಯಾಗ್ನೆಟ್ ಮಾಲ್ ಮಾಲೀಕರು ಹಾಗೂ ಸಿಬ್ಬಂದಿ ಬೇಸತ್ತಿದ್ದಾರೆ. ಪ್ರೇಮಿಗಳು ಕುಚ್ ಕುಚ್, ಕಿಸ್ ನೋಡೋಕೆ ಆಗದೇ ಅದನ್ನು ನಿಯಂತ್ರಿಸೋಕೆ ಹೊಸ ಉಪಾಯ ಮಾಡಿದ್ದಾರೆ.

ಮಾಲ್ ಗೆ ಎಂಟ್ರಿ ಆಗ್ತಾ ಇದ್ದಂತೆ ಗೇಟಿನ ಮುಂದೆ ಎಚ್ಚರಿಕೆಯ ಬೋರ್ಡ್ ಕಾಣ ಸಿಗುತ್ತೆ. ಮಾಲ್ ನಲ್ಲಿ ಕಿಸ್ ಮಾಡಬಾರದು ಎಂದು ಬೋರ್ಡ್ ಹಾಕಲಾಗಿದೆ. ಮಾಲ್ ಗೆ ಪ್ರತಿದಿನ ಅನೇಕ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬರ್ತಾರಂತೆ. ಅತೀ ಗಲಾಟೆ ಮಾಡುವ ಅವರು, ಗ್ರಾಹಕರಿಗೆ ಮುಜುಗರ ತರಿಸುವಂತೆ ನಡೆದುಕೊಳ್ಳುತ್ತಾರಂತೆ.

ಮಾಲ್ ಗೆ ಬಂದು ಶಾಪಿಂಗ್ ಮಾಡುವ ಬದಲು, ಮೂಲೆ ಹುಡುಕಿ, ಅವರ ಚೆಲ್ಲಾಟ ಶುರು ಮಾಡುತ್ತಾರಂತೆ. ಈ ಬಗ್ಗೆ ಕೇಳಿದ್ರೆ ಗಲಾಟೆ ಮಾಡ್ತಾರಂತೆ. ಮಾಲ್ ನಲ್ಲಿ ಸಿಸಿಟಿವಿ ಇದೆ. ಅಲ್ಲದೇ ಈ ಬಗ್ಗೆ ಗಮನ ಹರಿಸಲು ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಆದರೂ ಇದು ನಿಲ್ಲುತ್ತಿಲ್ಲ. ಹಾಗಾಗಿ ಮಾಲೀಕರು ಎಂಟ್ರಿ ಬೋರ್ಡ್ ನಲ್ಲಿಯೇ ಈ ಎಚ್ಚರಿಕೆ ನೀಡಿದ್ದಾರೆ.

ಅದಾಗಿಯೂ ಜೋಡಿ ತಪ್ಪಾಗಿ ನಡೆದುಕೊಂಡರೆ ಪೊಲೀಸ್ ಕರೆಸಿ ಇಲ್ಲವೇ ಪಾಲಕರನ್ನು ಕರೆಯಿಸಿ ವಾರ್ನ್ ಮಾಡುತ್ತಾರಂತೆ ಮಾಲ್ ಸಿಬ್ಬಂದಿ.

Write A Comment