ರಾಷ್ಟ್ರೀಯ

ಕಲಿಯುಗದ ಅಚ್ಚರಿ :ಈಕೆ ಮುಟ್ಟಿದ ವಸ್ತುಗಳೆಲ್ಲಾ ಭಸ್ಮ !

Pinterest LinkedIn Tumblr

fireಭಸ್ಮಾಸುರನ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿದ್ದಾರೆ. ತಾನು ಮುಟ್ಟಿದ್ದೆಲ್ಲವೂ ಭಸ್ಮವಾಗಲಿ ಎಂದು ವರ ಪಡೆದ ಆತ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಆದರೆ ಈ ಕಲಿಯುಗದಲ್ಲಿ ಒಬ್ಬ ಬಾಲಕಿ ಮುಟ್ಟಿದ್ದೆಲ್ಲವೂ ಭಸ್ಮವಾಗುವ ದಿವ್ಯ ಶಕ್ತಿಯನ್ನು ಪಡೆದು ಅಚ್ಚರಿಗೆ ಕಾರಣವಾಗಿದ್ದಾಳೆ.

ಹೌದು. ಉತ್ತರ ಪ್ರದೇಶದ ಝಾನ್ಸಿಯ ಗೋರ್ಮಾಚಿಯಾ ಹಳ್ಳಿಯಲ್ಲಿ ವಾಸವಾಗಿರುವ 12 ವರ್ಷದ ಬಾಲಕಿ ಇದೀಗ ಮುಟ್ಟಿದ್ದೆಲ್ಲವೂ ಭಸ್ಮವಾಗುವ ಶಕ್ತಿ ಹೊಂದಿದ್ದು ಈಕೆ ಯಾವುದೇ ವಸ್ತುವನ್ನು ಸ್ಪರ್ಶಿಸಲಿ, ಅದು ಬೆಂಕಿಗೆ ಆಹುತಿಯಾಗುತ್ತಿದೆ.

ಈ ಘಟನೆಯಿಂದ ಹಳ್ಳಿಗರು ಬೆಚ್ಚಿ ಬಿದ್ದಿದ್ದು ಹಲವರು ಈಕೆಯ ಮೈ ಮೇಲೆ ದೇವರು ಬಂದಿದೆ ಎನ್ನುತ್ತಿದ್ದಾರೆ ಇದು ದೆವ್ವವೊಂದು ಆಕೆಯ ಮೈಯೊಳಗೆ ಸೇರಿ ನಡೆಸುತ್ತಿರುವ ಅವಾಂತರ ಎಂದು ಹೆದರುತ್ತಿದ್ದಾರೆ.ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದ ಈಕೆ ಪತಿಯನ್ನು ಕಳೆದುಕೊಂಡಿದ್ದು ಊರ ಮುಖಂಡನೊಬ್ಬ ಆಕೆಯನ್ನು ದತ್ತು ಪಡೆದಿದ್ದು ಆತನ ಮನೆಯಲ್ಲಿಯೇ ವಾಸಿಸುತ್ತಿದ್ದಾಳೆ. ಇನ್ನೂ ಅಚ್ಚರಿಯ ವಿಷಯವೆಂದರೆ ಈಕೆ ಮುಟ್ಟಿದ ತಕ್ಷಣ ಬಲ್ಬ್ ಗಳು ತನ್ನಿಂದ ತಾನೇ ಉರಿಯತೊಡಗಿದ್ದು ಬಟ್ಟೆ ಸೇರಿದಂತೆ ಹಲವಾರು ವಸ್ತುಗಳು ಈಕೆಯ ಸ್ಪರ್ಶದಿಂದ ಭಸ್ಮವಾಗಿವೆ.

ಈಗಾಗಲೇ ಈಕೆಯನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದು ಈಕೆಯಿಂದ ಯಾವುದೇ ಅನಾಹುತವಾಗದಿರಲಿ ಎಂದು ವಿಶೇಷ ಪೂಜೆಯನ್ನೂ ಮಾಡುತ್ತಿದ್ದಾರಂತೆ.

Write A Comment