ಮನೋರಂಜನೆ

ಕ್ರಿಕೆಟ್ ಬೆಟ್ಟಿಂಗ್‌ಗೆ ಕಡಿವಾಣ, ದೇಣಿಗೆ ಬಗ್ಗೆ ನಿಗಾ: ಎಸ್‌ಐಟಿ

Pinterest LinkedIn Tumblr

money1ನವದೆಹಲಿ: ಕಪ್ಪು ಹಣದ ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನಿಯೋಜನೆ ಮಾಡಿದೆ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವುದು, ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವವರ ಬಗ್ಗೆ ನಿಗಾವಹಿಸುವಂತೆಯೂ ಸುಪ್ರೀಂ ಎಸ್‌ಐಟಿಗೆ ಸೂಚಿಸಿದೆ.

ಕಪ್ಪು ಹಣ ನಿಯಂತ್ರಣದ ಹೊಣೆ ಹೊತ್ತಿರುವ ಎಸ್‌ಐಟಿ ತಂಡ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ)ಯನ್ನು ಕೂಡಾ ತಮ್ಮ ನಿಯಂತ್ರಣಾಧಿಕಾರಕ್ಕೆ ತರುವ ಮೂಲಕ ಷೇರುಗಳಲ್ಲಿನ ಅನಿರೀಕ್ಷಿತ ಏರುಪೇರುಗಳ ಬಗ್ಗೆ ಗಮನ ವಹಿಸಬಹುದಾಗಿದೆ ಎಂದು ಹೇಳಿದೆ.

ಕಪ್ಪು ಹಣಗಳನ್ನು ಹೆಚ್ಚಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗಳಲ್ಲಿ,  ಶಾಲೆ, ಕಾಲೇಜು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವುದಕ್ಕೆ ಬಳಸಲಾಗುತ್ತದೆ ಎಂದು ಎಸ್‌ಐಟಿ ಹೇಳಿದೆ.

ಐಪಿಎಲ್ ನಡೆದಾಗ ಕಪ್ಪು ಹಣವನ್ನು ಯಥೇಚ್ಛವಾಗಿ ಬಳಸಲಾಗಿತ್ತು ಎಂದು ಎಸ್‌ಐಟಿ ತಮ್ಮ ವರದಿಯಲ್ಲಿ ಹೇಳಿದ್ದು, ಕಪ್ಪುಹಣಕ್ಕೆ ನಿಯಂತ್ರಣವೇರ್ಪಡಿಸಬೇಕಾದುದು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿದೆ.

Write A Comment