೩೯.೮೫ ಸೆಕಂಡಿನಲ್ಲಿ ೫೦೦ ಗ್ರಾಂ ಕೆಚಪ್ ಸೇವಿಸಿ ದಾಖಲೆ ಮಾಡಿದ ಮುಂಬೈನ ದಿನೇಶ್ ಉಪಾಧ್ಯಾಯ
೫೦೦ ಗ್ರಾಂ ಕೆಚಪ್ ಬಾಟಲಿ ಹಿಡಿದು ೩೯.೮೫ ಸೆಕಂಡಿನಲ್ಲಿ ಅದನ್ನು ಸೇವಿಸಿದ ಮುಂಬೈನ ದಿನೇಶ್ ಉಪಾಧ್ಯಾಯ ದಾಖಲೆ ಮಾಡಿದ್ದಾರೆ. ೫೦೦ಗ್ರಾಂ ಬಾಟಲಿಯಲ್ಲಿ ೪೫೩ ಗ್ರಾಂ ಕೆಚಪ್ ಇರುತ್ತದೆ.
೩೮ ವರ್ಷದ ಮುಂಬೈ ನಿವಾಸಿ ಈ ಹಿಂದಿನ ಜರ್ಮನಿಯ ಬೆನೆಡಿಕ್ಟ್ ವೆಬರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಬೆನೆಡಿಕ್ಟ್ ೩೨.೩೭ ಸೆಕಂಡುಗಳಲ್ಲಿ ೩೯೬ಗ್ರಾಮ್ ಕೆಚಪ್ ಕುಡಿದಿದ್ದರು.
ದಿನೇಶ್ ತಮ್ಮ ಹೆಸರಿನಲ್ಲಿ ಈಗಾಗಲೇ ೪೮ ಗಿನ್ನಿಸ್ ವಿಶ್ವದಾಖಲೆಗಳನ್ನು ಹೊಂದಿದ್ದು, ಇದು ಅವರ ಇತ್ತೀಚಿನ ಸಾಧನೆ!