ರಾಷ್ಟ್ರೀಯ

ಇದೊಂದು ಅಪರೂಪದ ಪ್ರೇಮ ಕಥೆ…!: 41 ವರ್ಷದ ಅಮೆರಿಕಾದ ಮಹಿಳೆ-25 ವರ್ಷದ ಭಾರತೀಯ ಗ್ರಾಮೀಣ ಯುವಕ

Pinterest LinkedIn Tumblr

preಅಮೆರಿಕಾದ ಈ ಆಧುನಿಕ ಮಹಿಳೆ ಪ್ರೀತಿಸಿದ್ದು ವಯಸ್ಸಿನಲ್ಲಿ ತನಗಿಂತ ಅತ್ಯಂತ ಕಿರಿಯನಾಗಿದ್ದ ಗ್ರಾಮೀಣ ಭಾರತದ ಯುವಕನನ್ನು. ಫೇಸ್ ಬುಕ್ ನಲ್ಲಾಗಿದ್ದ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಈತನನ್ನು ವಿವಾಹವಾಗುವ ಸಲುವಾಗಿಯೇ ತನ್ನ ಬಂಧು- ಬಳಗವನ್ನೆಲ್ಲಾ ಆಕೆ ತೊರೆದಿದ್ದಾಳೆ.

41 ವರ್ಷದ ಅಡ್ರಿಯನಾ ಪರೇಲ್ ಬೆಳೆದಿದ್ದು ಅಪ್ಪಟ ಪಾಶ್ಚಾತ್ಯ ಶೈಲಿಯಲ್ಲಿ. ಪಾರ್ಟಿ, ಕ್ಲಬ್ ಮತ್ತು ಪಬ್ ಕಲ್ಚರ್ ಗೆ ಒಗ್ಗಿ ಹೋಗಿದ್ದ ಅಡ್ರಿಯನಾ ಮನ ಸೋತಿದ್ದು ಮಾತ್ರ ಅಪ್ಪಟ ಭಾರತೀಯ ಗ್ರಾಮೀಣ ಸಂಸ್ಕೃತಿಯಲ್ಲಿ ಬೆಳೆದಿದ್ದ 25 ವರ್ಷದ ಮುಕೇಶ್ ಕುಮಾರ್ ಗೆ. ಫೇಸ್ ಬುಕ್ ನಲ್ಲಿ ಪರಿಚಿತರಾದ ಇಬ್ಬರೂ ಕ್ರಮೇಣ ಪರಸ್ಪರ ಪ್ರೀತಿಯಲ್ಲಿ ಮುಳುಗಿದರು.

ಕೊನೆಗೆ ಪ್ರೀತಿಯ ಕರೆಗೆ ಓಗೊಟ್ಟು ಭಾರತಕ್ಕೆ ಹಾರಿ ಬಂದ ಅಡ್ರಿಯನಾ ಪರೇಲ್, ಮುಕೇಶ್ ಕುಟುಂಬದವರ ಒಪ್ಪಿಗೆ ಪಡೆದು ವಿವಾಹವಾಗಿದ್ದಾರೆ. ಮೊದ ಮೊದಲು ಗ್ರಾಮೀಣ ಸಂಸ್ಕೃತಿಗೆ ಒಗ್ಗಿಗೊಳ್ಳಲು ಬಹಳಷ್ಟು ಕಷ್ಟಪಟ್ಟ ಅಡ್ರಿಯನಾ ಈಗ ಅಪ್ಪಟ ಭಾರತೀಯ ಗೃಹಿಣಿಯಾಗಿದ್ದಾರೆ. ಗಂಡ ಮುಕೇಶ್ ನೊಂದಿಗೆ ಎತ್ತಿನ ಗಾಡಿಯಲ್ಲಿ ಹೊಲಕ್ಕೆ ತೆರಳಿ ಕೃಷಿ ಚಟುವಟಿಕೆಯಲ್ಲೂ ಪಾಲ್ಗೊಳ್ಳುತ್ತಾರೆ.

Write A Comment