ಮನೋರಂಜನೆ

ಜುಲೈ 31ಕ್ಕೆ ‘ಲೊಡ್ಡೆ’ ತೆರೆಗೆ

Pinterest LinkedIn Tumblr

loddeಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅವರ ಅಭಿನಯದ ಸ್ಯಾಂಡಲ್ ವುಡ್ ನ ಕಾಮಿಡಿ, ಥ್ರಿಲರ್ ‘ಲೊಡ್ಡೆ” ಸಿನಿಮಾ ಮುಂದಿನವಾರ ತೆರೆ ಕಾಣಲಿದೆ.

ಡಾ.ವಿಷ್ಣುವರ್ಧನ್ ಛಾಯೆಯಲ್ಲಿ ಮೂಡಿ ಬಂದಿರುವ ಈ ಸ್ಫೆಷಲ್ ಸಿನಿಮಾಗೆ ಎಸ್ ವಿ ಸುರೇಶ್ ಆಕ್ಷ್ಯನ್ ಕಟ್ ಹೇಳಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಚಿನ್ನಿ ಚರಣ್ ಸಂಗೀತ ಸಂಯೋಜಿಸಿದ್ದಾರೆ.

ಮಂಜುನಾಥ್ ನಿರ್ಮಾಣದ ‘ಲೊಡ್ಡೆ’ ಚಿತ್ರದ ಹಾಡೊಂದನ್ನು ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರಿಗೆ ಅರ್ಪಿಸಲಾಗಿದೆ.

ಈಗಾಗಲೇ ಟ್ರೈಲೆರ್ ಮತ್ತು ಹಾಡುಗಳಿಂದ ಸುದ್ದಿ ಮಾಡುತ್ತಿರೋ ಲೊಡ್ಡೆ ಸಿನಿಮಾ ಜುಲೈ 31ರಂದು ಪ್ರೇಕ್ಷಕರ ಎದುರು ಬರಲಿದೆ.

Write A Comment