ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ಸಾಗುತ್ತಿದ್ದು ಇದಕ್ಕೆ ನಿದರ್ಶನವೆಂಬಂತೆ ನಾಲ್ಕು ವರ್ಷದ ಬಾಲಕಿಯ ಮೇಲೆ ಪರಿಚಿತ ಆಟೋ ಚಾಲಕನೊಬ್ಬ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.
ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದ್ದು ಪ್ರತಿದಿನ ಶಾಲೆಗೆ ಕರೆದೊಯ್ಯುತ್ತಿದ್ದ 50 ವರ್ಷ ವಯಸ್ಸಿನ ಕಾಮುಕ ಆಟೋ ಚಾಲಕನೊಬ್ಬ ಈ ಕೃತ್ಯ ಎಸಗುವ ಮೂಲಕ ತನ್ನ ಕ್ರೌರ್ಯ ಪ್ರದರ್ಶಿಸಿದ್ದಾನೆ. ಶಾಲಾ ಅವಧಿ ಮುಗಿದ ನಂತರ ಬಾಲಕಿಯನ್ನು ಡೇ-ಕೇರ್ ಹೋಮ್ಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿ ಮನೆಗೆ ಬಿಟ್ಟು ಪರಾರಿಯಾಗಿದ್ದಾನೆ.
ಮನೆಗೆ ಬಂದ ಬಾಲಕಿ ತನ್ನ ಗುಪ್ತಾಂಗದಲ್ಲಿ ನೋವಾಗುತ್ತಿದೆ ಎಂದು ಅಳತೊಡಗಿದ್ದು ಈ ಸಮಯದಲ್ಲಿ ಆಟೋ ಡ್ರೈವರ್ ಥೊಮಸ್ ಜಾರ್ಜ್ ನಡೆಸಿದ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಸೆಕ್ಸನ್ 376 ಹಾಗೂ ಪೋಸ್ಕೋ ಕಾಯಿದೆಯಡಿ ಪ್ರಕರಣಗಳನ್ನು ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.