ಕರ್ನಾಟಕ

2020ರ ನಂತರವೂ ಮುಖ್ಯಮಂತ್ರಿಯಾಗಿರುತ್ತೇನೆ: ಸಿದ್ದರಾಮಯ್ಯ

Pinterest LinkedIn Tumblr

Siddaramaiahಬೆಂಗಳೂರು: ತಮ್ಮ ಐದು ವರ್ಷಗಳ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿಯಾಗಿರುವುದಲ್ಲದೆ ೨೦೧೮ರ ವಿಧಾನಸಭಾ ಚುನಾವಣೆಗಳಿಗೂ ಮುಂದಾಳತ್ವ ವಹಿಸಿ ೨೦೨೦ರ ನಂತರವೂ ಮುಖ್ಯಮಂತ್ರಿಯಾಗಿ ಉಳಿಯುತ್ತೇನೆ ಎಂದು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ತಾವು ಮೂಲತಃ ಕಾಂಗ್ರೆಸ್ ಸದಸ್ಯನಲ್ಲ ಎಂದು ಒಪ್ಪಿಕೊಂಡ ಅವರು ಆದರೆ ಪಕ್ಷದ ಮತ್ತು ಹೈಕಮ್ಯಾಂಡಿನ ಸಂಪೂರ್ಣ ಬೆಂಬಲ ತಮಗಿದೆ ಎಂದು ಹೇಳಿಕೊಂಡಿದ್ದಾರೆ ಅಲ್ಲದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ ಪರಮೇಶ್ವರ್ ಜೊತೆಗೆ ಒಳ್ಳೆಯ ಸಂಬಂಧ ಇದೆ ಎಂದಿದ್ದಾರೆ.

ವಿಧಾನಪರಿಷತ್ತಿನಲ್ಲಿ ವಿರೋಧಪಕ್ಷದ ನಾಯಕೆ ಕೆ ಎಸ ಈಶ್ವರಪ್ಪ, ಮುಖ್ಯಮಂತ್ರಿಗೆ ತಮ್ಮ ಪಕ್ಷದಲ್ಲೇ ಬೆಂಬಲ ಇಲ್ಲ ಎಂದಾಗ “ನಾನು ನನ್ನ ಪೂರ್ಣಾವಧಿಯನ್ನು ಪೂರೈಸುವುದಲ್ಲದೆ, ೨೦೨೦ರನಂತರವೂ ಮುಖ್ಯಮಂತ್ರಿಯಾಗಿರುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣದಂತೆ ಬಿಜೆಪಿ ಸದಸ್ಯರಿಗೆ ಸೂಚಿಸಿರುವ ಅವರು “ನನ್ನ ಒಳ್ಳೆಯ ಆಡಳಿತವನ್ನು ನೋಡಿ ಜನರು ೨೦೧೮ರಲ್ಲಿ ನಮ್ಮನ್ನು ಮತ್ತೆ ಆಯ್ಕೆ ಮಾಡುತ್ತಾರೆ. ಈಶ್ವರಪ್ಪ ನಿಮಗೆ ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಇದೆಯೇ?” ಎಂದು ಕುಟುಕಿದ್ದಾರೆ.

ರಾಜ್ಯದ ವಿತ್ತೀಯ ಪರಿಸ್ಥಿತಿಯ ಬಗ್ಗೆ ಅವರು ಮಾತನಾಡಿದ್ದು “ಕೇಂದ್ರದ ಅನುದಾನದ ಕಡಿತದ ಹೊರತಾಗಿಯೂ ರಾಜ್ಯ ಸರ್ಕಾರ ಒಳ್ಳೆಯ ಸ್ಥಿತಿಯಲ್ಲಿದೆ” ಎಂದಿದ್ದಾರೆ.

ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ೫೫೦೦ ಕೋಟಿ ಕೇಂದ್ರ ಅನುದಾನ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿರುವ ಆವರು “ಇದರಿಂದ ಹಲವಾರು ಬಡ ಜನ ಪರ ಯೋಜನೆಗಳಾದ ನರೇಗಾ ಮತ್ತು ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮಗಳಿಗೆ ತೊಂದರೆ ಆಗಿದೆ” ಎಂದಿದ್ದಾರೆ.

ಕೇಂದ್ರ ಅನುದಾನದ ಬಗ್ಗೆ ಮುಖ್ಯಮಂತ್ರಿ ಸದನವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿ ಈಶ್ವರಪ್ಪ ಮುಂದಾಳತ್ವದಲ್ಲಿ ಬಿಜೆಪಿ ಮುಖಂಡರು ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.

Write A Comment