ಮನೋರಂಜನೆ

ಎರಡು ಬಾರಿ ಮದ್ವೆಯಾಗ್ತಿದ್ದಾರೆ ಭಾರತ ತಂಡದ ವಿಕೆಟ್ ಕೀಪರ್ !

Pinterest LinkedIn Tumblr

vicketಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಈಗಾಗಲೇ ಒಂದು ವಿವಾಹವಾಗಿ ವಿಚ್ಚೇದನ ಪಡೆದಿದ್ದು, ಈಗ ಮತ್ತೊಮ್ಮೆ ಎರಡು ಬಾರಿ ಮದುವೆಯಾಗುತ್ತಿದ್ದಾರೆ. ಅದೇಗೆ ಅಂತಿರಾ. ಈ ಸ್ಟೋರಿ ಓದಿ.

ದಿನೇಶ್ ಕಾರ್ತಿಕ್, ಖ್ಯಾತ ಸ್ಕ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇವರಿಬ್ಬರ ವಿವಾಹಕ್ಕೆ ಎರಡೂ ಕುಟುಂಬಸ್ಥರೂ ಒಪ್ಪಿಗೆ ನೀಡಿದ್ದಾರೆ. ಇವರಿಬ್ಬರ ವಿವಾಹ ಆಗಸ್ಟ್ 18 ಹಾಗೂ ಆಗಸ್ಟ್ 20 ರಂದು ಚೆನ್ನೈನಲ್ಲಿ ಎರಡು ಬಾರಿ ನಡೆಯಲಿದೆ.

ದೀಪಿಕಾ ಪಲ್ಲಿಕಲ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿರುವುದರಿಂದ ಆಗಸ್ಟ್ 18 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದರೆ ಹಿಂದೂ ಧರ್ಮಕ್ಕೆ ಸೇರಿರುವ ದಿನೇಶ್ ಕಾರ್ತಿಕ್ ಆಗಸ್ಟ್ 20 ರಂದು ತೆಲುಗು- ನಾಯ್ಡು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹವಾಗಲಿದ್ದಾರೆ. ದಿನೇಶ್ ಕಾರ್ತಿಕ್ ಈ ಮೊದಲು ತಮ್ಮ ಬಾಲ್ಯದ ಗೆಳತಿ ನಿಖಿತಾ ಅವರನ್ನು ವಿವಾಹವಾಗಿದ್ದು, ಬಳಿಕ ಅವರಿಂದ ವಿಚ್ಚೇದನ ಪಡೆದಿದ್ದರು.

Write A Comment