ಮನೋರಂಜನೆ

ವಿಶ್ವದ ಟಾಪ್ ಆಟಗಾರರ ಪಟ್ಟಿಯಲ್ಲಿ ಧೋನಿ

Pinterest LinkedIn Tumblr

dhoniಜಾಹೀರಾತು ಕ್ಷೇತ್ರದಲ್ಲಿ ಮಾರುಕಟ್ಟೆ ಇರುವ ವಿಶ್ವದ 20 ಮಂದಿ ಟಾಪ್ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಒಂಭತ್ತನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಬಹು ಪಾಲು ಟೆನಿಸ್ ತಾರೆಯರೇ ಇದ್ದು, ಕ್ರಿಕೆಟ್ ಲೋಕದಿಂದ ಮಹೇಂದ್ರ ಸಿಂಗ್ ಧೋನಿಯವರು ಮಾತ್ರ ಆಯ್ಕೆಯಾಗಿದ್ದಾರೆ. ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರೆರ್ ಮೊದಲ ಸ್ಥಾನದಲ್ಲಿದ್ದು, ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸ್ ಆಟಗಾರ ನೋವಾಕ್ ಜೋಕ್ ವಿಕ್ (ಎಂಟನೇ ಸ್ಥಾನ) ಅವರ ಕೆಳಗಿನ ಸ್ಥಾನದಲ್ಲಿ ಧೋನಿ ಇದ್ದಾರೆ.

ಗಾಲ್ಫ್ ಆಟಗಾರ ಟೈಗರ್ ಉಡ್ ಎರಡನೇ ಸ್ಥಾನದಲ್ಲಿದ್ದರೆ, ಮತ್ತೊಬ್ಬ ಗಾಲ್ಫ್ ಆಟಗಾರ ರೋರಿ ಮೆಕ್ ಆರನೇ ಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿಯವರು ಮರಿಯಾ ಶರಪೋವಾ, ಉಸೇನ್ ಬೋಲ್ಟ್, ಫ್ಲಾಯಿಡ್ ಮೇವೆದರ್, ಆಂಡಿ ಮುರ್ರೇ ಮೊದಲಾದವರನ್ನು ಹಿಂದಿಕ್ಕಿದ್ದು, ಧೋನಿಯವರಿಗೆ ಇಂದಿಗೂ ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂಬುದನ್ನು ನಿರೂಪಿಸಿದ್ದಾರೆ. ಫುಟ್ಬಾಲ್ ಆಟಗಾರ ರೋನಾಲ್ಡೋ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. ಟಾಪ್ 20 ಮಾರ್ಕೆಟಬಲ್ ಆಟಗಾರರ ಪಟ್ಟಿ ಹೀಗಿದೆ ನೋಡಿ.

1. ರೋಜರ್ ಫೆಡರರ್ – ಟೆನಿಸ್

2. ಟೈಗರ್ ಉಡ್ಸ್ – ಗಾಲ್ಫ್

3. ಫಿಲ್ ಮಿಕಿಲ್ಸನ್ – ಗಾಲ್ಫ್

4. ಲೆಬ್ರಾನ್ ಜೇಮ್ಸ್ – ಬ್ಯಾಸ್ಕೆಟ್ ಬಾಲ್

5. ಕೆವಿನ್ ಡುರಾಂಟ್ – ಬ್ಯಾಸ್ಕೆಟ್ ಬಾಲ್

6. ರೋರಿ ಮೆಕ್ – ಗಾಲ್ಫ್

7. ನೋವಾಕ್ ಜೋಕ್ ವಿಕ್ – ಟೆನಿಸ್

8. ರಫೆಲ್ ನಡಾಲ್ – ಟೆನಿಸ್

9. ಮಹೇಂದ್ರ ಸಿಂಗ್ ಧೋನಿ – ಕ್ರಿಕೆಟ್

10. ಕ್ರಿಸ್ಟಿನೋ ರೋನಾಲ್ಡೋ – ಫುಟ್ ಬಾಲ್

11. ಕೋಬೆ ಬ್ರಿಯಾಂಟ್ – ಬ್ಯಾಸ್ಕೆಟ್ ಬಾಲ್

12. ಮರಿಯಾ ಶರಪೋವಾ – ಟೆನಿಸ್

13. ಲಿಯೊನೆಲ್ ಮೆಸ್ಸಿ – ಫುಟ್ ಬಾಲ್

14. ಉಸೇನ್ ಬೋಲ್ಟ್ – ಟ್ರ್ಯಾಕ್

15. ನೇಮಾರ್ – ಫುಟ್ ಬಾಲ್

16. ಅಂಡಿ ಮುರ್ರೆ – ಟೆನಿಸ್

17. ಕೈ ನಿಶಿಕೋರಿ – ಟೆನಿಸ್

18. ಡೆರಿಕ್ ರೋಸ್ – ಬ್ಯಾಸ್ಕೆಟ್ ಬಾಲ್

19. ಪ್ಲಾಯಡ್ ಮೇವೆದರ್ – ಬಾಕ್ಸಿಂಗ್

20. ಸೆರೆನಾ ವಿಲಿಯಮ್ಸ್ – ಟೆನಿಸ್

Write A Comment