ಮನೋರಂಜನೆ

ಹಾಸ್ಯ ಚಕ್ರವರ್ತಿ ನರಸಿಂಹರಾಜುರವರ ವಿಡಿಯೋ ಮಿಸ್ ಮಾಡ್ದೇ ನೋಡಿ…

Pinterest LinkedIn Tumblr

narasimhaಕನ್ನಡ ಚಿತ್ರರಂಗದಲ್ಲಿ ‘ಹಾಸ್ಯ ಚಕ್ರವರ್ತಿ’ ಎಂದೇ ಗುರುತಿಸಲ್ಪಡುವವರು ಖ್ಯಾತ ನಟ ನರಸಿಂಹರಾಜು. ಇಂದು ಅವರ 92 ನೇ ಜನ್ಮ ದಿನವಾಗಿದೆ. ಅವರ ಮೊಮ್ಮಕ್ಕಳು ನರಸಿಂಹರಾಜು ಅವರ ವಿಡಿಯೋವೊಂದನ್ನು ನಿರ್ಮಿಸಿದ್ದು, ಯೂ ಟ್ಯೂಬ್ ನಲ್ಲಿ ಇದು ಎಲ್ಲರ ಗಮನ ಸೆಳೆಯುತ್ತಿದೆ.

ನರಸಿಂಹರಾಜು ಅವರ ಮೊಮ್ಮಕ್ಕಳಾದ ಎಸ್.ಡಿ. ಅರವಿಂದ್ ಹಾಗೂ ಅವಿನಾಶ್ ನರಸಿಂಹರಾಜು ‘ರತ್ನಮಂಜರಿ’ ಚಿತ್ರದಲ್ಲಿ ನರಸಿಂಹರಾಜು ಅಭಿನಯಿಸಿದ್ದ ‘ಯಾರು ಯಾರು ನೀ ಯಾರು..ಎಲ್ಲಿಂದ ಬಂದೆ ಯಾವೂರು…’ ಹಾಡನ್ನು ರೀ ಮಿಕ್ಸ್ ಮಾಡಿದ್ದು, 3 ನಿಮಿಷ 4 ಸೆಕೆಂಡುಗಳ ಈ ವಿಡಿಯೋದಲ್ಲಿ ನರಸಿಂಹರಾಜು ಅವರ ಬಣ್ಣದ ಬದುಕಿನ ಸಾಧನೆಯನ್ನು ಕಟ್ಟಿಕೊಡುವ ಯತ್ನ ನಡೆಸಿದ್ದಾರೆ.

ವರನಟ ಡಾ.ರಾಜಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ಖ್ಯಾತ ನಿರ್ದೇಶಕ ಜಿ.ವಿ. ಅಯ್ಯರ್ ಅವರುಗಳು ನರಸಿಂಹರಾಜು ಅವರ ಕುರಿತು ಆಡಿರುವ ಮೆಚ್ಚುಗೆಯ ಮಾತುಗಳೂ ಈ ವಿಡಿಯೋದಲ್ಲಿದೆ. ಚಿತ್ರರಂಗಕ್ಕೆ ಬಂದ 26 ವರ್ಷಗಳಲ್ಲಿ 256 ಚಿತ್ರಗಳಲ್ಲಿ ನಟಿಸಿದ ದೈತ್ಯ ಪ್ರತಿಭೆ ನರಸಿಂಹ ರಾಜು ಅವರದ್ದು. ನೀವೂ ಈ ವಿಡಿಯೋವನ್ನು ಇದೇ ಪುಟದ ಕೆಳ ಭಾಗದಲ್ಲಿರುವ ವಿಡಿಯೋ ವಿಭಾಗದಲ್ಲಿ ನೋಡಿ.

Write A Comment