ಮನೋರಂಜನೆ

ಮೆಗಾ ಆಫರ್‌ನ ಉತ್ತುಂಗದಲ್ಲಿ ಕಿಚ್ಚ ಸುದೀಪ್

Pinterest LinkedIn Tumblr

suಸಿನಿಮಾ, ಕ್ರಿಕೆಟ್, ಬ್ಯುಸಿನೆಸ್, ರಿಯಾಲಿಟಿ ಷೋ ಹೀಗೆ ನಾನಾ ಪ್ರಕಾರಗಳಲ್ಲಿ   ಜನಮನ್ನಣೆ ಪಡೆದಿರುವ ಕಿಚ್ಚ ಸುದೀಪ್‌ಗೆ ಈಗ ಮೆಗಾ ಆಫರ್‌ವೊಂದು ಒಲಿದು ಬಂದಿದೆ. ಬಾಹುಬಲಿ ಚಿತ್ರ ಬಿಡುಗಡೆಗೊಂಡಿರುವ ಬೆನ್ನಲ್ಲೇ ಸುದೀಪ್‌ಗೆ 20  ಕೋಟಿಯ ಬಿಗ್ ಆಫರ್ ಒಲಿದು ಬಂದಿರುವುದು ಅವರ ಅಭಿಮಾನಿಗಳ ಮೊಗವನ್ನು ಅರಳಿಸಿದೆ.

ಇಂತಹ ಮೆಗಾ ಆಫರ್ ಅನ್ನು ತಂದುಕೊಟ್ಟಿರುವುದು ಬಿಗ್‌ಬಾಸ್ ರಿಯಾಲ್ಟಿ ಷೋ. ಈಗಾಗಲೇ ಬಿಗ್‌ಬಾಸ್‌ನ 1 ಮತ್ತು 2ನೆ ಆವೃತ್ತಿಯನ್ನು ಯಶಸ್ವಿಯಾಗಿಸುವ ಜೊತೆಗೆ  ಚಾನೆಲ್‌ಗಳ  ಟಿಆರ್‌ಪಿಯನ್ನು ಹೆಚ್ಚಿಸಿದ್ದ ಕಿಚ್ಚ ಸುದೀಪ್ ಮುಂಬರುವ 5 ಆವೃತ್ತಿಯ ಬಿಗ್‌ಬಾಸ್ ರಿಯಾಲ್ಟಿ ಷೋ ನಡೆಸಿಕೊಡಲು ಬರೋಬ್ಬರಿ 20 ಕೋಟಿಗಳನ್ನು ಬಾಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಅಂದ ಹಾಗೆ ಈ ಬಿಗ್‌ಬಾಸ್ ರಿಯಾಲ್ಟಿ ಷೋ ಅನ್ನು ಆಯೋಜಿಸು ತ್ತಿರುವುದು ಕಲರ್ಸ್ಚ ಕನ್ನಡ ಚಾನೆಲ್‌ನವರು. ಕಾರ್ಯ ಕ್ರಮವು ವರ್ಷದ ಅಂತ್ಯದಲ್ಲಿ ಬಿತ್ತರ ಗೊಳ್ಳಲಿದೆ. ಮೂಲಗಳ ಪ್ರಕಾರ ಈಗ ಬಿಗ್‌ಬಾಸ್ ಷೋ ಕಾರ್ಯಕ್ರಮವು ಲೋನಾವಾಲದ  ಬದಲು  ಬೆಂಗಳೂರಿನ ಕೆಂಗೇರಿ ಬಳಿಯೇ ಆಯೋಜಿಸುವುದರಿಂದ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ವಿಜಯರಾಘವೇಂದ್ರ ಹಾಗೂ ಅಕುಲ್‌ಬಾಲಾಜಿ ಅವರು ಬಿಗ್‌ಬಾಸ್ ಚಾಂಪಿಯನ್ಸ್ ಗಳಾಗುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಅಲ್ಲದೆ ಈ ರಿಯಾಲ್ಟಿ ಷೋ ಮೂಲಕ ಚಿತ್ರರಂಗದಿಂದ  ಮರೆಯಾಗಿದ್ದ  ನಿಖಿತಾ ತುಕ್ರಲ್, ಸಂತೋಷ್, ತಿಲಕ್, ಸೃಜನ್ ಲೋಕೇಶ್‌ಗೂ ಜನಪ್ರಿಯತೆಯನ್ನು ತಂದುಕೊಟ್ಟಿದೆ.

Write A Comment