ಮನೋರಂಜನೆ

ಧೂಮ್ 4 ರಲ್ಲಿ ಐಶ್ವರ್ಯ ಗೆ ಕೊಕ್ ದೀಪಿಕಾ ಪಡುಕೋಣೆ ಸೆಲೆಕ್ಟ್

Pinterest LinkedIn Tumblr

ishಬಾಲಿವುಡ್ ನಲ್ಲಿ ಧೂಮ್ ಚಿತ್ರ ಈಗ ಅನೇಕ ಅವತರಣಿಕೆಯನ್ನು  ಹೊಂದಿದೆ. ಪ್ರತಿಬಾರಿ ಅದನ್ನು ನಿರ್ಮಾಣ ಮಾಡಿದಾಗಲೂ ಸಹಿತ ಅದರ ಗಳಿಕೆ ಬೆಟ್ಟದಷ್ಟಿರುತ್ತದೆ. ಆ ಚಿತ್ರದಲ್ಲಿ ಬರುವ ವಿಲನ್ ಗಳು ಸಾಕಷ್ಟು ಆಸಕ್ತಿ ಹೊಂದುವ ಬಾಲಿವುಡ್ ಹೀರೊಗಳಾಗಿದ್ದು ಆ ಚಿತ್ರಗಳ ಅವತರಣಿಕೆಗಳು ಜನರಿಗೆ ಹೆಚ್ಚು ಹೆಚ್ಚು ಕುತೂಹಲ ಉಂಟಾಗುವಂತೆ ಮಾಡಿದೆ. ಇತ್ತೀಚಿಗೆ ಧೂಮ್ -3 ಚಿತ್ರ ಬಿಡುಗಡೆ ಆಗಿತ್ತು ಅದರಲ್ಲಿ ನಟ ಆಮೀರ್ ಕಾನ್ ಅವರು ವಿಲನ್ ಆಗಿದ್ದರು. ಕತ್ರಿನಾ ಕೈಫ್ ಮತ್ತು ಆಮೀರ್ ಖಾನ್ ಅವರು ಇದರಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರು. ಇದು ಸಾಕಷ್ಟು ಗಳಿಕೆ ಮಾಡಿತ್ತು ಚಿತ್ರ. ವಿಜಯ್ ಕೃಷ್ಣ ನಿರ್ದೇಶನದ ಈ ಚಿತ್ರ ಯಶ್ ಫಿಲಿಮ್ಸ್ ಅಡಿಯಲ್ಲಿ ನಿರ್ಮಾಣವಾಗಿತ್ತು.

ಈಗ ಈ ಚಿತ್ರದ ನಾಲ್ಕನೇ ಭಾಗದತ್ತ ಚಿತ್ತ ನೆಟ್ಟಿದ್ದಾರೆ ನಿರ್ಮಾಣ ಸಂಸ್ಥೆಯವರು. ಅದರ ಅನ್ವಯ ಈಗ ಆ ಚಿತ್ರದ ಮುಖ್ಯ ಪಾತ್ರಧಾರಿಗಳ ಹುಡುಕಾಟ ನಡೆಸುವಾಗ ನಿರ್ಮಾಪಕ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದು ಕರಾವಳಿ ಸುಂದರಿಯರಾದ ಐಶ್ವರ್ಯ ರೈ ಮತ್ತು ದೀಪಿಕಾ ಪಡುಕೋಣೆ. ಆದರೆ ಐಶ್ವರ್ಯ ಅವರ ಬದಲಿಗೆ ದೀಪಿಕಾ ಅವರ ಕೈ ಸೇರಿದೆ ಅವಕಾಶ ಅದಕ್ಕೆ ಮುಖ್ಯ ಕಾರಣ ಈ ಚಿತ್ರದಲ್ಲಿ ರಾಶಿ ರಾಶಿ ರೂಪ ತೋರುವ ವಿಷಯದಲ್ಲಿ ದೀಪಿಕಾ ಮುಂದೆ ಇದ್ದಾರೆ. ಐಶ್ ಅಷ್ಟೊಂದು ಬಿಚ್ಚಮ್ಮ ಅಲ್ಲ, ಆದ ಕಾರಣ ಈ ಅಂಶವನ್ನು ಮುಂದಿಟ್ಟು ಹೃತಿಕ್ ರೋಶನ್ ಅವರಿಗೆ ಜೊತೆಗಾತಿಯಾಗಲು ದೀಪಿಕಾ ಅವರನ್ನು ಆಯ್ಕೆ ಮಾಡಿದ್ದಾರಂತೆ.

ಧೂಮ್ 4ರಲ್ಲಿ ಆಕ್ಷನ್ ಜೊತೆಗೆ ಹಾಡು ಮತ್ತು ರೊಮ್ಯಾಂಟಿಕ್ ಸೀನ್ ಹೆಚ್ಚಾಗಿರುತ್ತದೆ ಎನ್ನುವ ಸುದ್ದಿ ಹೊರ ಬಂದಿದೆ. ಅಂತಹ ದೃಶ್ಯಗಳಲ್ಲಿ ಐಶ್ ನಟಿಸಲ್ಲ ಎನ್ನುವ ಸುದ್ದಿ ಅರಿತಿರುವ ಸಿನಿತಂಡ ದೀಪಿಕೆಗೆ ಅವಕಾಶ ನೀಡಿದ್ದಾರಂತೆ.

Write A Comment