ಮನೋರಂಜನೆ

ನೀನಾಸಂ ಸತೀಶ್ ರಾಕೆಟ್ ಚಿತ್ರದ ಎರಡು ಹಾಡುಗಳ ಶೂಟಿಂಗ್ ಪೂರ್ಣ

Pinterest LinkedIn Tumblr

rakeನೀನಾಸಂ ಸತೀಶ್ ಅವರ ನಟನೆ ಹಾಗೂ ನಿರ್ದೇಶನದ ರಾಕೆಟ್ ಚಿತ್ರದ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿತ್ತು.  ಬಿಡುಗಡೆಯಾದ ಹಾಡುಗಳಲ್ಲಿ ಎರಡಕ್ಕೆ ಇತ್ತೀಚಿಗೆ ಶೂಟಿಂಗ್ ನಡೆಸಲಾಯಿತು. ಇದನ್ನು ಪುನೀತ್ ರಾಜ್ ಕುಮಾರ್ ಮತ್ತು ಐಶಾನಿ ಶೆಟ್ಟಿ ಅವರು ಹಾಡಿದ್ದಾರೆ.

ತಣ್ಣಗೆ ಇದ್ವಿ ನಾವು ಇದು ಆ ಹಾಡಿನ ಸಾಲುಗಳಾಗಿವೆ. ಇದನ್ನು ಮಾಸ್ಟರ್ ಮುರಳಿ ಅವರು ಮಿನರ್ವ ಮಿಲ್ ನಲ್ಲಿ ಶೂಟಿಂಗ್ ಮಾಡಿದ್ದಾರೆ. ಸತೀಶ್ ಹಾಗೂ ಐಶಾನಿ ಇದರ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.

ರಂಗಿ ರಂಗಿ ಎನ್ನುವ ಸಾಲುಗಳನ್ನು ಹೊಂದಿರುವ ಮತ್ತೊಂದು ಹಾಡನ್ನು ಸಹ ಬೆಂಗಳೂರಿನ ಸಮೀಪದಲ್ಲಿರುವ ಡಾಬಾ ಒಂದರಲ್ಲಿ ಚಿತ್ರೀಕರಣ ಮಾಡಲಾಯಿತು. ಇದನ್ನು ಸಹಿತ ಮಾಸ್ಟರ್ ಮುರಳಿ ಅವರೇ ಕೊರಿಯಾಗ್ರಫಿ ಮಾಡಿದ್ದು. ಈಗ ಒಂದು ಹಾಡು ಮಾತ್ರ ಶೂಟಿಂಗ್ ಮಾಡಲು ಉಳಿದಿದ್ದು ಅದನ್ನು ಈ ತಿಂಗಳ ಕೊನೆಯಲ್ಲಿ ಮಾಡಲಾಗುತ್ತದೆ ಎಂದಿದ್ದಾರೆ ಚಿತ್ರತಂಡದವರು.

Write A Comment