ಮನೋರಂಜನೆ

ಡಿಡಿ ಕಿಸಾನ್ ಚಾನಲ್ ಪ್ರಚಾರಕ್ಕಾಗಿ ಕಾಸು ಪಡೆದಿಲ್ಲ ಎಂದ ಅಮಿತಾಬ್ !

Pinterest LinkedIn Tumblr

4124357358-amitabh-bachchan-2ಡಿಡಿ ಕಿಸಾನ್ ಚಾನಲ್ ಪ್ರಚಾರಕ್ಕಾಗಿ ನಾನು ಹಣವನ್ನೂ ಪಡೆದಿಲ್ಲ ಮಾತ್ರವಲ್ಲ ಯಾವುದೇ ವಿಧದ ಒಪ್ಪಂದಕ್ಕೂ ಸಹ ಸಹಿ ಹಾಕಿಲ್ಲ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ.

ಡಿಡಿ ಕಿಸಾನ್ ಚಾನಲ್​ನ ಪ್ರಚಾರಕ್ಕಾಗಿ ಅಮಿತಾಬ್ ಬಚ್ಚನ್​ ಅವರು 6.31 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಮಿತಾಬ್ ಡಿಡಿ ಕಿಸಾನ್ ಚಾಲನ್​ನ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರುವುದು ನಿಜವಾಗಿದ್ದರೂ ಸಹ ನಾನು ಡಿಡಿ ಕಿಸಾನ್ ಚಾನಲ್ ನೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಮತ್ತು ಹಣವನ್ನೂ ಪಡೆದಿಲ್ಲ. ಡಿಡಿ ಕಿಸಾನ್ ಚಾನಲ್​ಗೆ ಪ್ರಚಾರ ನೀಡುತ್ತಿರುವ ಲೊವೆ ಲಿಂಟಸ್ ಎಂಬ ಆಡ್ ಏಜೆನ್ಸ್​ಗೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.

ನಾನು ಸಾಮಾಜಿಕ ಒಳಿತಿಗಾಗಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇನೆ. ಅದೇ ರೀತಿ  ಡಿಡಿ ಕಿಸಾನ್ ಚಾನಲ್​ನ ಪರ ಪ್ರಚಾರಮಾಡಿದ್ದು ಈ ಕುರಿತು ಇಲ್ಲಸಲ್ಲದ ಆರೋಪ ಸರಿಯಲ್ಲ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದರು.

Write A Comment