ರಾಷ್ಟ್ರೀಯ

ನೀರು ತರಲು ಹೋದ ಯುವತಿಯ ಶೀಲ ಕಳೆದ ಕಾಮುಕ !

Pinterest LinkedIn Tumblr

9894rape1ನೀರು ತರಲು ಹೋಗಿದ್ದ ಯುವತಿಯೊಬ್ಬಳನ್ನು ಕಾಮುಕನೊಬ್ಬ ರಿವಾಲ್ವರ್ ತೋರಿಸಿ ಅತ್ಯಾಚಾರವೆಸಗಿದ ಹೇಯ ಘಟನೆ ಮೀರತ್ ನಲ್ಲಿ ನಡೆದಿದೆ.

ಇಲ್ಲಿನ ಮಂಡಾಲಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು  18 ವರ್ಷದ ಯುವತಿಯ ಮೇಲೆ ಕಣ್ಣಿಟ್ಟಿದ್ದ ಪಕ್ಕದ ಮನೆಯ ಬೇರೆ ಕೋಮಿನ ಕಾಮುಕ ಯುವಕನೊಬ್ಬ ಆಕೆ ಬೋರವೆಲ್ ನಿಂದ ನೀರು ತರಲು ಹೋದ ಸಮಯದಲ್ಲಿ ಹಿಂಬಾಲಿಸಿ ರಿವಾಲ್ವರ್‌ನಿಂದ ಬೆದರಿಸಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿದ್ದು ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಅತ್ಯಾಚಾರಕ್ಕೊಳಗಾದ ಯುವತಿ ಮನೆಗೆ ಬಂದು ಅತ್ಯಾಚಾರದ ವಿಷಯ ತಿಳಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಎರಡು ಸಮುದಾಯಗಳ ನಡುವೆ ಉದ್ರಿಕ್ತ ಪರಿಸ್ಥಿತಿ ಉಂಟಾಗಿದ್ದು ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಈ ನಡುವೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅತ್ಯಾಚಾರ ನಡೆಸಿದ ಕಾಮುಕನ ಪತ್ತೆಗೆ ಮುಂದಾಗಿದ್ದಾರೆ.

Write A Comment