ರಾಷ್ಟ್ರೀಯ

‘ಅಮ್ಮ’ನ ಅನಾರೋಗ್ಯದ ಕುರಿತು ಮಾತನಾಡಿದರೆ ನಾಲಿಗೆ ಕತ್ತರಿಸ್ತಾರಂತೆ !

Pinterest LinkedIn Tumblr

5017aiadmk-mp-pr-sundaram_650x400_81437365773ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯದ ಕುರಿತು ಇಲ್ಲ ಸಲ್ಲದ ಸುಳ್ಳು ಹೇಳಿದರೆ ಅವರ ನಾಲಿಗೆಯನ್ನು ಕತ್ತರಿಸುತ್ತೇನೆ ಎಂದು ಎಐಎಡಿಎಂಕೆ ಸಂಸದರೊಬ್ಬರು ಧಮಕಿ ಹಾಕಿರುವ ಘಟನೆ ನಡೆದಿದೆ.

ಜಯಲಲಿತಾ ಅವರ ಆರೋಗ್ಯ ಹದಗೆಟ್ಟಿದ್ದು, ಆಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ  ಸುಂದರಂಅನಾರೋಗ್ಯದ ಕಾರಣಕ್ಕೆ ಅಮ್ಮವಿಶ್ರಾಂತಿ ತೆಗೆದುಕೊಳ್ಳಬೇಕು ಅಂತ ಕರುಣಾನಿಧಿ ಹೇಳುತ್ತಾರೆ. ಅವರ ವಯಸ್ಸೆಷ್ಟು? 93 ವರ್ಷ ವಯಸ್ಸಾಗಿರುವ ಕರುಣಾನಿಧಿ ತಾವು ಮಾತ್ರ ನೂರು ವರ್ಷ ಬದುಕಬೇಕು ಅಂತ ಬಯಸುತ್ತಾರೆ. ಇಷ್ಟು ವಯಸ್ಸಾದರೂ ಅಧಿಕಾರವನ್ನು ತನ್ನ ಮಗನಿಗೆ ಕರುಣಾನಿಧಿ ಹಸ್ತಾಂತರಿಸಿಲ್ಲ ಎಂದಿರುವ ಸಂಸದ  ಪಿಆರ್ ಸುಂದರಂ ಅಮ್ಮನ ವಿರುದ್ಧ ಮಾತನಾಡಿದರೆ, ಅಂತಹವರ ನಾಲಿಗೆ ಕತ್ತರಿಸಿ ಹಾಕಿಬಿಡುವುದಾಗಿ ಕಿಡಿಕಾರಿದ್ದಾರೆ.

ನಾಲಿಗೆ ಕತ್ತರಿಸುತ್ತೇನೆ ಎಂಬ ಹೇಳಿಕೆ ನೀಡಿರುವ ಸಂಸದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ವಕ್ತಾರೆ ಸಿಆರ್ ಸರಸ್ವತಿ, ನಾನು ಆ ಕುರಿತು ಪರಿಶೀಲಿಸಲಿದ್ದು ಅವರು ಹಾಸ್ಯವಾಗಿ ಹೇಳಿರಬಹುದು ಎಂಬ ಸಮರ್ಥನೆಯನ್ನೂ ನೀಡಿದ್ದಾರೆ.

Write A Comment