ರಾಷ್ಟ್ರೀಯ

ಈ ಪಾತಕಿ ಬಿಚ್ಚಿಟ್ಟ ರಹಸ್ಯ ನಿಜಕ್ಕೂ ಭಯಾನಕ

Pinterest LinkedIn Tumblr

9758rapistನವದೆಹಲಿ: ಶುಕ್ರವಾರದಂದು ಪೊಲೀಸರಿಗೆ ಸಿಕ್ಕಿ ಬಿದ್ದ ಮಕ್ಕಳ ಸರಣಿ ಕೊಲೆಗಾರ ಪೊಲೀಸರ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದು, ಇದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

24 ವರ್ಷದ ರವೀಂದ್ರ ಕುಮಾರ್ ಈವರೆಗೆ 16 ಪುಟ್ಟ ಮಕ್ಕಳ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದು, ಅವರನ್ನು ಹತ್ಯೆ ಮಾಡಿದ ಬಳಿಕವೇ ಶವದ ಮೇಲೆ ಅತ್ಯಾಚಾರವೆಸಗುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಕುಡಿದ ವೇಳೆ ತಾನು ಈ ಕೃತ್ಯಗಳನ್ನು ಮಾಡುತ್ತಿದ್ದು, ಇದಕ್ಕಾಗಿ ಸ್ಲಂ ಗಳ ಬಳಿ ಬಾಲಕಿಯರಿಗಾಗಿ ಹೊಂಚು ಹಾಕಿ ಕಾದು ನಿಲ್ಲುತ್ತಿದ್ದೇನೆಂದು ತಿಳಿಸಿದ್ದಾನೆ.

ತನ್ನ ಬಂಧನವಾಗದಿದ್ದರೆ ಇದನ್ನೇ ಮುಂದುವರೆಸುತ್ತಿದ್ದುದಾಗಿ ಯಾವುದೇ ಪಶ್ಚಾತಾಪದ ಭಾವವೂ ಇಲ್ಲದೆ ನಿರ್ಭಿಡೆಯಿಂದ ಹೇಳುತ್ತಿದ್ದರೆ ವಿಚಾರಣೆ ಮಾಡುತ್ತಿದ್ದ ಪೊಲೀಸರೇ ಅವಾಕ್ಕಾಗಿದ್ದಾರೆ. 2008 ರಲ್ಲಿ 17 ವರ್ಷದವನಾಗಿದ್ದಾಗ ರವೀಂದ್ರ ಕುಮಾರ್ ತನ್ನ ಮೊದಲ ಪಾತಕ ಮಾಡಿದ್ದು, ಇಲ್ಲಿಯವರೆಗೆ 16 ಬಾಲಕಿಯರನ್ನು ಅಪಹರಿಸಿ ಹತ್ಯೆ ಮಾಡಿ ಅತ್ಯಾಚಾರವೆಸಗಿದ್ದಾನೆ. 6 ನೇ ತರಗತಿಯವರೆಗೆ ಮಾತ್ರ ಓದಿರುವ ಈತ ಡ್ರಗ್ ವ್ಯಸನಿಯೂ ಹೌದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Write A Comment