ಅಂತರಾಷ್ಟ್ರೀಯ

3 ಗಂಟೆಯಲ್ಲೇ ಎರಡಂತಸ್ತಿನ ಮನೆ ಕಟ್ಟಿದ ಚೀನಾ ಕಂಪನಿ

Pinterest LinkedIn Tumblr

4961zhuoda-unveils-two-story-3d__1227256970ಚೀನಾದ ಕಟ್ಟಡ ನಿರ್ಮಾಣ ಕಂಪನಿಯೊಂದು ಕೇವಲ ಮೂರು ಗಂಟೆ ಅವಧಿಯಲ್ಲಿ ಎರಡು ಅಂತಸ್ತಿನ ಸುಂದರ ಮನೆ ಕಟ್ಟುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ.

ಜುಲೈ 17 ರಂದು ಚೀನಾದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, 3 ಡಿ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗಿದ್ದ ಕೋಣೆಗಳನ್ನು ಕ್ರೇನ್ ಸಹಾಯದಿಂದ ತಂದು ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಜೋಡಿಸಲಾಗಿದೆ. ಈ ಅವಧಿಯಲ್ಲಿ ಒಳಾಂಗಣ ವಿನ್ಯಾಸವಲ್ಲದೇ ಪ್ಲಂಬಿಂಗ್, ವೈರಿಂಗ್ ಮೊದಲಾದ ಕೆಲಸಗಳನ್ನೂ ಪೂರೈಸಲಾಗಿದೆ.

ಇದೇ ಮನೆಯನ್ನು ಪ್ರಸಕ್ತದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರ್ವಹಿಸಿದ್ದರೆ ಆರು ತಿಂಗಳು ಬೇಕಾಗುತ್ತಿತ್ತು ಎನ್ನಲಾಗಿದ್ದು, ಫ್ಯಾಕ್ಟರಿಯಲ್ಲಿ 3 ಡಿ ಪ್ರಿಂಟಿಂಗ್ ಟೆಕ್ನಾಲಜಿ ಮೂಲಕ ಕೆಲವೇ ದಿನಗಳಲ್ಲಿ ಸಿದ್ದಪಡಿಸಲಾಗಿತ್ತು ಎಂದು ಹೇಳಲಾಗಿದೆ. ಈ ಮನೆ ನಿರ್ಮಾಣಕ್ಕೆ ಪ್ರತಿ ಚದರಡಿಗೆ 400-480 ಅಮೆರಿಕನ್ ಡಾಲರ್ ವೆಚ್ಚ ತಗುಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಮರಳಿನ ದರ ಮುಗಿಲೆತ್ತರಕ್ಕೇರುತ್ತಿರುವುದಲ್ಲದೇ ಸಿಗುವುದೂ ಗಗನಕುಸುಮವಾಗಿರುವ ಕರ್ನಾಟಕದಲ್ಲೂ ಇಂತಹ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲಿ ಎಂದು ಆಶಿಸೋಣ ಅಲ್ಲವೇ.

Write A Comment